ದಕ್ಷಿಣ ಭಾರತದ ಖ್ಯಾತ ನಟ ಜೂ. ಎನ್ ಟಿಆರ್, ಪ್ರಶಾಂತ್ ನೀಲ್ ಹಾಗೂ ಅವರ ಕುಟುಂಬಸ್ಥರು ಕರಾವಳಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದಾರೆ.
ಭಾನುವಾರವಷ್ಟೇ ಎಲ್ಲ ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದಿದ್ದರು. ಇಂದು ನಟ ರಿಷಬ್ ಶೆಟ್ಟಿ ಊರಿನಲ್ಲಿ ಸುತ್ತಾಡಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಇಂದು ತಮ್ಮ ಊರಾದ ಕೆರಾಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ರಿಷಬ್ ಅವರ ಹುಟ್ಟೂರು.
ಈ ವೇಳೆ ರಿಷಬ್ ಶೆಟ್ಟಿ ತಮ್ಮ ಗ್ರಾಮದ ಪರಿಚಯ ಮಾಡಿಸಿದ್ದಾರೆ. ಎಲ್ಲರೂ ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಮ್ಮನ ಆಸೆ ಈಡೇರಿಸಲು ಜೂನಿಯರ್ ಎನ್ ಟಿಆರ್ ಅವರು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ನಂತರ ಕುಂದಾಪುರದಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸದ ಕುರಿತು ಜೂ. ಎನ್ ಟಿಆರ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.