ದೆಹಲಿ: ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಜೆಪಿ ನಡ್ಡಾ (JP Nadda) ಅವರು ರಾಜ್ಯಸಭೆಯ ಸಭಾನಾಯಕರಾಗಿ (Leader of the House) ಆಯ್ಕೆಯಾಗಿದ್ದಾರೆ.
ನಡ್ಡಾ ಅವರು ಕ್ಯಾಬಿನೆಟ್ ನಲ್ಲಿ ಕೆಮಿಕಲ್ ಮತ್ತು ರಸಗೊಬ್ಬರಗಳ ಖಾತೆ ಹೊಂದಿದ್ದಾರೆ. ಪ್ರಧಾನಿ ಮೋದಿಯವರ (PM Modi) ಎರಡನೇ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವರು ಪಿಯೂಷ್ ಗೋಯಲ್ ರಾಜ್ಯ ಸಭೆಯ ಸಭಾನಾಯಕರಾಗಿದ್ದರು. 2020 ರಲ್ಲಿ ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಂತರ ನಡ್ಡಾ ಬಿಜೆಪಿ ಅಧ್ಯಕ್ಷರಾಗಿದ್ದರು.

ಕಾನೂನಿನಲ್ಲಿ ಪದವಿ ಪಡೆದಿರುವ ನಡ್ಡಾ ತಮ್ಮ ರಾಜಕೀಯ ಪ್ರಯಾಣವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಆರೆಸ್ಸೆಸ್ ನ ವಿದ್ಯಾರ್ಥಿಗಳ ವಿಭಾಗದಲ್ಲಿದ್ದರು. 1991 ರಲ್ಲಿ ಪಕ್ಷದ ಯುವ ಘಟಕ, BJYM ಅಥವಾ ಭಾರತೀಯ ಜನತಾ ಯುವ ಮೋರ್ಚಾದ ನಾಯಕರಾಗಿದ್ದರು. 2012ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2014 ರಲ್ಲಿ ಅಮಿತ್ ಶಾ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರು. ಹಿಮಾಚಲ ಪ್ರದೇಶದ ಅಸೆಂಬ್ಲಿಯಲ್ಲಿಯೂ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1993, 1998 ಮತ್ತು 2007ರಲ್ಲಿ ಮೂರು ಬಾರಿ ಬಿಲಾಸ್ಪುರ್ ನಲ್ಲಿ ಗೆಲುವು ಸಾಧಿಸಿದ್ದರು. 1998 ಮತ್ತು 2003 ರಲ್ಲಿ ಆರೋಗ್ಯ ಸಚಿವರಾಗಿದ್ದರು.
