ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿಜಕ್ಕೂ ಕಳಪೆ ಮರುಪ್ರವೇಶ ಮಾಡಿದ್ದಾರೆ. ಕಳೆದ ಎರಡು ಋತುಗಳನ್ನು ಗಾಯಗಳಿಂದ ಕಳೆದುಕೊಂಡ ನಂತರ, ಜೋಫ್ರಾ ಆರ್ಚರ್ ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಐಪಿಎಲ್ 2025 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಕಣಕ್ಕೆ ಇಳಿದರು. ಇಂಗ್ಲೆಂಡ್ ವೇಗಿಯ ಐಪಿಎಲ್ ಮರಳುವಿಕೆ ಅವರು ಆಶಿಸಿದಂತೆ ಆಗಲಿಲ್ಲ ಮತ್ತು ಅವರನ್ನೇ ಮುಜುಗರಕ್ಕೆ ಈಡು ಮಾಡಿತು.
ರಾಜಸ್ಥಾನ್ ರಾಯಲ್ಸ್‌ನ ವೇಗಿ ಜೋಫ್ರಾ ಆರ್ಚರ್ ಭಾನುವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ ಇತಿಹಾಸದಲ್ಲಿ ಅಗತ್ಯವಿಲ್ಲದ ದಾಖಲೆಯನ್ನು ಸೃಷ್ಟಿಸಿದರು. ಜೋಫ್ರಾ ಆರ್ಚರ್ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 76 ರನ್‌ಗಳನ್ನು ಬಿಟ್ಟುಕೊಟ್ಟರು (4-0-76-0).
ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಅನ್ನು ದಾಖಲಿಸಿದರು. ದೆಹಲಿ ಕ್ಯಾಪಿಟಲ್ಸ್ ವಿರುದ್ಧ 73 ರನ್‌ಗಳನ್ನು ಬಿಟ್ಟುಕೊಟ್ಟ ಮೋಹಿತ್ ಶರ್ಮಾ ಅವರ ಅತ್ಯಂತ ಕೆಟ್ಟ ಅಂಕಿಅಂಶಗಳನ್ನು ಮುರಿದು, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.
ಜೋಫ್ರಾ ಆರ್ಚರ್‌ರ ದುಃಸ್ವಪ್ನದ ಪ್ರದರ್ಶನವು ಪವರ್‌ಪ್ಲೇನಲ್ಲಿ ಪ್ರಾರಂಭವಾಯಿತು. ಟ್ರಾವಿಸ್ ಹೆಡ್ ಒಂದು ಓವರ್‌ನಲ್ಲಿ 23 ರನ್‌ಗಳನ್ನು ಬಿಟ್ಟುಕೊಟ್ಟರು. ನಂತರ ಇಶಾನ್ ಕಿಶನ್ ತಮ್ಮ ಶಕ್ತಿಪ್ರದರ್ಶಿಸಿದರು. ಅಂತಿಮ ಓವರ್ನಲ್ಲಿ ವೇಗಿ ಐದು ಬೌಂಡರಿಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ ಎತ್ತರದ ನೋ-ಬಾಲ್ ಫೋರ್ ಕೂಡ ಕೊಟ್ಟರು.
ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ಬೌಲಿಂಗ್
0/76—ಜೋಫ್ರಾ ಆರ್ಚರ್ (ಆರ್‌ಆರ್) vs ಎಸ್‌ಆರ್‌ಎಚ್, ಹೈದರಾಬಾದ್, 2025*
0/73—ಮೋಹಿತ್ ಶರ್ಮಾ (ಜಿಟಿ) vs ಡಿಸಿ, ದೆಹಲಿ, 2024
0/70—ಬಾಸಿಲ್ ಥಂಪಿ (ಎಸ್‌ಆರ್‌ಎಚ್) vs ಆರ್‌ಸಿಬಿ, ಬೆಂಗಳೂರು, 2018
0/69—ಯಶ್ ದಯಾಳ್ (ಜಿಟಿ) vs ಕೆಕೆಆರ್, ಅಹಮದಾಬಾದ್, 2023
1/68—ರೀಸ್ ಟೋಪ್ಲೆ (ಆರ್‌ಸಿಬಿ) vs ಎಸ್‌ಆರ್‌ಎಚ್, ಬೆಂಗಳೂರು, 2024
1/68—ಲ್ಯೂಕ್ ವುಡ್ (ಎಂಐ) vs ಡಿಸಿ, ದೆಹಲಿ, 2024