ಬೆಂಗಳೂರು : ನೀವೇನಾದರೂ ಬೆಂಗಳೂರು ದಕ್ಷಿಣ ಜಿಲ್ಲೆಯವರಾ? ರಾಮನಗರ ಅಥವಾ ಸುತ್ತಮುತ್ತಲಿನ ನಿವಾಸಿಗಳಾ? ಹಾಗಾದರೆ, ನಿಮಗೊಂದು ಗೋಲ್ಡನ್ ಚಾನ್ಸ್ ದೊರೆತಿದೆ. ಇದೇ ಮಾರ್ಚ್ 5ರಂದು ರಾಮನಗರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಸರ್ಕಾರವೇ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ಸಿಗುವುದು ಗ್ಯಾರಂಟಿಯಾಗಿದೆ. ಸುಮಾರು 200 ಕಂಪನಿಗಳು ಪಾಲ್ಗೊಳ್ಳಲಿದ್ದು, ಸುಮಾರು 20 ಸಾವಿರ ಜನರಿಗೆ ಉದ್ಯೋಗ ನೀಡಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರಮುಖ ಮಾಹಿತಿ
ಉದ್ಯೋಗ ಮೇಳದ ದಿನಾಂಕ: ಮಾರ್ಚ್ 5, ಗುರುವಾರ
ಸಮಯ: ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ
ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ, ರಾಮನಗರ
ಪ್ರಮುಖ ವಲಯಗಳು: ಉತ್ಪಾದನೆ, ಬ್ಯಾಂಕಿಂಗ್, ಐಟಿ, ಸೇಲ್ಸ್, ಗಾರ್ಮೆಂಟ್ಸ್, ಸರ್ವಿಸ್, ಟೂರಿಸಂ
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸ್ ಅಥವಾ ಫೇಲ್ ಆದವರಿಗೆ 1,221, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸ್ ಆದವರಿಗೆ 3,118, ಐಟಿಐ 3,482, ಡಿಪ್ಲೊಮಾ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್) 503, ಡಿಪ್ಲೊಮಾ (ಸೇಪ್ಟಿ) 16, ಐಟಿಐ ಹಾಗೂ ಡಿಪ್ಲೊಮಾ 2,793, ಬಿಸಿಎ, ಎಂಸಿಎ, ಬಿಕಾಂ, ಬಿಎಸ್ ಸಿ, ಎಂಎಸ್ ಸಿ 217, ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ 8,200, ಯಾವುದೇ ಪದವಿ ವಿದ್ಯಾರ್ಹತೆಗೆ 7,022, ಬಿಇ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್) 270, ಬಿಇ (ಕೆಮಿಕಲ್) 10, ಬಿ-ಟೆಕ್/ಎಂಬಿಎ 01, ಇತರೆ 2,963, ಡೈರಿ ಟೆಕ್ನಾಲಜಿ 4, ಡಿಪ್ಲೊಮಾ ಇನ್ ಪ್ರಿಂಟಿಂಗ್ 26, ಎಂಎಸ್ಸಿ ಕೆಮಿಸ್ಟ್ ವಿಭಾಗದಲ್ಲಿ 20 ಉದ್ಯೋಗದ ಅವಕಾಶಗಳಿವೆ.
ಅಭ್ಯರ್ಥಿಗಳ ನೋಂದಣಿ ಹೇಗೆ?
ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡುತ್ತಿದ್ದು ಯಾವುದೇ ವಿದ್ಯಾರ್ಹತೆಯ 18 ವರ್ಷ ಮೇಲ್ಪಟ್ಟ ಪುರುಷ/ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. https://docs.google.com/forms/d/e/1FAIpQLSc07MZrMxk3jOe8ggmCSRJe2b67VIjqDe3L05tB8I1OS14Gg/viewform ಗೂಗಲ್ ಫಾರಂ ಲಿಂಕ್ ಬಳಸಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವುದು. ನೋಂದಣಿ ಮಾಡದವರೂ ಮೇಳದ ದಿನದಂದು ನೇರವಾಗಿ ಹಾಜರಾಗಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಮಧ್ಯಪ್ರಾಚ್ಯ ಯುದ್ಧದಿಂದ ಕುಕ್ಕುಟೋದ್ಯಮಕ್ಕೆ ಭಾರೀ ಹೊಡೆತ.. ರಫ್ತಾಗದೇ ಕರ್ನಾಟಕದಲ್ಲೇ ಉಳಿದ ಲಕ್ಷಾಂತರ ಮೊಟ್ಟೆ!



















