ಬೆಂಗಳೂರು: ಜೆಕೆ ಟೈರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಹೆವಿ ಮೋಟರ್ ವೆಹಿಕಲ್ ಚಾಲಕರ ಪುತ್ರಿಯರಿಗೆ 2025-26ನೇ ಶೈಕ್ಷಣಿಕ ಸಾಲಿನಲ್ಲಿ ವರ್ಷಕ್ಕೆ 25 ಸಾವಿರ ರೂಪಾಯಿ ವಿದ್ಯರ್ಥಿ ವೇತನ ಘೋಷಣೆ ಮಾಡಿದೆ. ವಿದ್ಯಾರ್ಥಿನಿಯರು ಜೆಕೆ ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸ್ಕಾಲರ್ ಶಿಪ್ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನವಾಗಿದೆ.
ವರ್ಷಕ್ಕೆ ಯಾರಿಗೆ ಎಷ್ಟು ಸ್ಕಾಲರ್ ಶಿಪ್?
ವೃತ್ತಿಪರ ಪದವಿ ಕೋರ್ಸ್ ಓದುತ್ತಿರುವವರು- 25 ಸಾವಿರ ರೂ.
ಸಾಮಾನ್ಯ ಪದವಿ ಅಧ್ಯಯನ ಮಾಡುತ್ತಿರುವವರು- 15 ಸಾವಿರ ರೂ.
ಡಿಪ್ಲೋಮಾ ಕೋರ್ಸ್ ಗೆ ಸೇರಿಕೊಂಡವರು- 15 ಸಾವಿರ ರೂ.
ಅರ್ಹತೆಗಳು ಏನೇನು?
ಹೆವಿ ಮೋಟರ್ ವೆಹಿಕಲ್ ಗಳ ಚಾಲಕರ ಪುತ್ರಿಯರಾಗಿದ್ದು, ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್ಗಳು ಅಥವಾ ಡಿಪ್ಲೊಮಾ ಕೋರ್ಸ್ಗಳಲ್ಲಿ ದಾಖಲಾಗಿರುವ ಮಹಿಳಾ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸಿಗಲಿದೆ.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕ ಪಡೆದಿರಬೇಕು.
ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು
ಅರ್ಜಿದಾರರು ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ, ಕರ್ನಾಟಕ ಮತ್ತು ತಮಿಳುನಾಡು ನಿವಾಸಿಗಳಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್ ಸೈಟ್ ಆಗಿರುವ Buddy4Study ಗೆ ಲಾಗಿನ್ ಆಗಿ.
ನಿಮ್ಮ ಇಮೇಲ್, ಮೊಬೈಲ್ ನಂಬರ್ ನೊಂದಿಗೆ Buddy4Study ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
‘ಜೆಕೆ ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ ಕಾರ್ಯಕ್ರಮ 2025-26 ‘ ಅರ್ಜಿ ನಮೂನೆ ಪುಟ ಓಪನ್ ಆಗುತ್ತದೆ.
ಅರ್ಜಿ ಪ್ರಕ್ರಿಯೆ ಪ್ರಾರಂಭಿಸಲು ‘ಅರ್ಜಿ ಪ್ರಾರಂಭಿಸು’ ಮೇಲೆ ಕ್ಲಿಕ್ ಮಾಡಿ.
ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಸಂಬಂಧಿತ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಅರ್ಜಿ ಸಲ್ಲಿಸಿ



















