ಲಡಾಕ್: ಜಿಯೋ 5 ಜಿ ಸೇವೆಯನ್ನು(Jio 5G service)ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್ ವಿಸ್ತರಿಸಿದೆ. ಈಗ ಈ ಮಾಹಿತಿಯನ್ನು ಭಾರತೀಯ ಸೇನೆಯ ಫೈರ್ ಆ್ಯಂಡ್ ಪ್ಯೂರಿ ಕಾರ್ಪ್ಸ್ ಘಟಕ(Fire and Pure Corps Unit)ಟ್ವೀಟ್ ಮೂಲಕ ತಿಳಿಸಿದೆ. ಸಿಯಾಚಿನ್ ಹಿಮ ನದಿಯಲ್ಲಿ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ಆಪರೇಟರ್ ಎಂಬ ಹೆಗ್ಗಳಿಕೆಗೆ ಜಿಯೋ ಈಗ ಪಾತ್ರವಾಗಿದೆ. ಸಂಪರ್ಕದ ದೃಷ್ಟಿಯಿಂದ ಇದು ಸೇನೆಗೆ ಮಹತ್ವದ್ದಾಗಿದೆ.
ಜಿಯೋ ಟೆಲಿಕಾಂ ಮತ್ತು ಭಾರತೀಯ ಸೇನೆಯು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್(Siachen Glacier) ನಲ್ಲಿ ಮೊದಲ 5 ಜಿ ಮೊಬೈಲ್ ಟವರ್ ಯಶಸ್ವಿಯಾಗಿ ಸ್ಥಾಪಿಸಿದೆ.
ಜ. 15 ರಂದು ಸೇನಾ ದಿನಾಚರಣೆಯ ಮೊದಲು ಸಿಯಾಚಿನ್ ಗ್ಲೇಸಿಯರ್ ನಲ್ಲಿ 4 ಜಿ ಮತ್ತು 5 ಜಿ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಸವಾಲಿನ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದ ಸೇನೆ, ಹಿಮಾಲಯದ ಕಾರಕೋರಂ ಶ್ರೇಣಿಯಲ್ಲಿ (Karakoram range of the Himalayas)16,000 ಅಡಿ ಎತ್ತರದಲ್ಲಿ ಈ 5ಜಿ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಲಾಜಿಸ್ಟಿಕ್ಸ್ ಸೇರಿದಂತೆ ಸಿಬ್ಬಂದಿಯ ಸುರಕ್ಷ ತೆಯನ್ನು ಸೇನೆ ಖಚಿತಪಡಿಸಿತು. ಆದ್ದರಿಂದ ಜಿಯೋ ತನ್ನ ಸ್ಥಳೀಯ ಫುಲ್ ಸ್ಟ್ಯಾಕ್ 5 ಜಿ ತಂತ್ರಜ್ಞಾನವನ್ನು ಬಳಸಿತು. ಫೈರ್ ಆ್ಯಂಡ್ ಫ್ಯೂರಿ ಸಿಗ್ನಲರ್ಸ್ ಮತ್ತು ಸಿಯಾಚಿನ್ ವಾರಿಯರ್ಸ್ ಜಿಯೋ ತಂಡದೊಂದಿಗೆ ಕೈಜೋಡಿಸಿದ ಕಾರಣ ಸಾಧನೆ ಮಾಡಲು ಸಾಧ್ಯವಾಗಿದೆ.