ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ನೌಕರರು ಪ್ರತಿ ವರ್ಷ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಜೀವನ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿದಾರರಿಗೆ ಪ್ರತಿ ತಿಂಗಳು ಪಿಂಚಣಿಯೇ ಸಿಗುವುದಿಲ್ಲ. ಅದರಲ್ಲೂ ಈಗ ಪಿಂಚಣಿದಾರರು ಪಿಂಚಣಿ ಪಡೆಯಲು ನವೆಂಬರ್ 30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಆದರೆ, ಈಗ ಜೀವನ ಪ್ರಮಾಣಪತ್ರವನ್ನು ಆನ್ ಲೈನ್ ಮೂಲಕವೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ?
ಜೀವನ್ ಪ್ರಮಾಣ ಪೋರ್ಟಲ್: ಜೀವನ್ ಪ್ರಮಾಣ ಪೋರ್ಟಲ್ (https://jeevanpramaan.gov.in/v1.0/ppouser/login) ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಮುಖದ ದೃಢೀಕರಣ: UIDAI ಆಧಾರ್ ಆಧಾರಿತ ಮುಖದ ದೃಢೀಕರಣ ತಂತ್ರಜ್ಞಾನವನ್ನು ಬಳಸಿ ಮನೆಯಲ್ಲೇ ಕುಳಿತು ಸಲ್ಲಿಸಬಹುದು.
ಮೊಬೈಲ್ ಅಪ್ಲಿಕೇಶನ್: ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿರುವ ಜೀವನ್ ಪ್ರಮಾಣ ಫೇಸ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು.
ಆಫ್ ಲೈನ್ ಮೂಲಕ ಸಲ್ಲಿಸೋದು ಹೇಗೆ?
ಅಂಚೆ ಕಚೇರಿ ಸೇವೆಗಳು: ಪೋಸ್ಟ್ ಮ್ಯಾನ್ ಮನೆಗೆ ಬಂದು ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸಬಹುದು.
ಬ್ಯಾಂಕಿಂಗ್: ಪಿಂಚಣಿದಾರರು ಬ್ಯಾಂಕಿಂಗ್ ಮೂಲಕವೂ ಸಲ್ಲಿಸಬಹುದು, ಎಟಿಎಂ ಅಥವಾ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಇಸ್ರೋದಲ್ಲಿ 55 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: 92 ಸಾವಿರ ರೂಪಾಯಿ ಸಂಬಳ


















