ಕೋಲಾರ: ಕೋಲಾರ ಕ್ಷೇತ್ರದಲ್ಲಿ ಮೈತ್ರಿ ಹಾಗೂ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು (Mallesh Babu) ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್‌ನ (Congress) ಕೆ.ವಿ.ಗೌತಮ್ (K.V.Gowtham) ವಿರುದ್ಧ ಬಾಬು ಅವರು 69 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳು. ದೇವೇಗೌಡರು ಮತ್ತು ಕುಮಾರಸ್ವಾಮಿ ನಂಬಿಕೆಯಿಟ್ಟು ಟಿಕೆಟ್ ನೀಡಿದ್ದರು. ಅದಕ್ಕೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿ ವರ್ಕೌಟ್ ಆಗಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಅದರ ಲಾಭ ನಮಗೆ ಸಿಕ್ಕಿದೆ. ಒಂದು ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದೆ. 6 ಲಕ್ಷ ಮತಗಳನ್ನು ಮತದಾರರು ನೀಡಿದ್ದಾರೆ ಎಂದು ಮಲ್ಲೇಶ್ ಬಾಬು ಹೇಳಿದ್ದಾರೆ.