ದಾವಣಗೆರೆ: ಇತ್ತೀಚೆಗೆ ದಾವಣಗೆರೆಯಲ್ಲಿ ಜೆಡಿಎಸ್ ಮುಖಂಡ ಟಿ. ಅಜ್ಗರ್ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡು ವಾರಗಳು ಕಳೆಯುತ್ತಿದೆ. ಈಗ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರನ್ನು ಬಂಧಿಸಲಾಗಿದೆ.
ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಈ ಮೊದಲು ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರು ಮಾಡೆಲ್ ಕೂಡ ಆಗಿದ್ದರು. ಮಾಡೆಲ್ ಆಗಿ ಕೆಲವು ಉತ್ಪನಗಳ ಪ್ರಚಾರ ಕೂಡ ಮಾಡಿದ್ದಾರೆ. ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ರೌಡಿ ಶೀಟರ್ ಖಾಲೀದ್ ಪೈಲ್ವಾನ್‌ಗೆ ಸಾಥ್ ನೀಡಿದ ಆರೋಪ ಇವರ ವಿರುದ್ಧ ಕೇಳಿಬಂದಿದೆ.
ದಾವಣಗೆರೆಯ ಬಾಷಾ ನಗರದಲ್ಲಿ ನ.10ರಂದು ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದ ಅಸ್ಗರ್ ಮೇಲೆ ಕಾಂಗ್ರೆಸ್ ಮುಖಂಡ ಖಾಲೀದ್ ಪೈಲ್ವಾನ್ ಚಾಕುವಿನಿಂದ ದಾಳಿ ಮಾಡಿದ್ದರಿಂದ ಗಂಭೀರ ಗಾಯಗೊಂಡ ಅಜ್ಗರ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಒಂದಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಆ ಬಳಿಕ ಕೊಲೆಗೆ ಯತ್ನ ನಡೆಯಿತು. ಆದರೆ, ಕೊಲೆ ಪ್ರಯತ್ನ ವಿಫಲವಾಗಿದೆ.
ಸವಿತಾ ಬಾಯಿ ಅವರು ಅಸ್ಗರ್ ಕೊಲೆಗೆ ಸಾಥ್ ನೀಡಿದಲ್ಲದೇ, ಆರೋಪಿ ಖಾಲೀದ್ ಪೈಲ್ವಾನ್‌ಗೆ ಆಶ್ರಯ ಕಲ್ಪಿಸಿ, ಹಣಕಾಸಿನ ನೆರವು ನೀಡಿ, ತಪ್ಪಿಸಿಕೊಳ್ಳಲು ಸಹಕರಿಸಿರುವುದು ತನಿಖೆಯಿಂದ ಬಯಲಾಗಿರುವುದರಿಂದ ಅಜಾದ್ ನಗರ ಠಾಣೆಯ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಪೊಲೀಸರ ಕೈಗೆ ಸಿಗಬಾರದು ಎನ್ನುವ ಕಾರಣಕ್ಕೆ ಕಳೆದ ಒಂದು ವಾರದಿಂದ ಆರೋಪಿ ಖಾಲೀದ್ ಹಾಗೂ ಸವಿತಾಬಾಯಿ ಬೆಂಗಳೂರು, ಗೋವಾ ಹಾಗೂ ದೆಹಲಿ ಸುತ್ತಾಡಿದ್ದರು. ಖಚಿತ ಮಾಹಿತಿ ಪಡೆದ ದಾವಣಗೆರೆ ಅಜಾದ್ ನಗರ ಪೊಲೀಸರು ಸದ್ಯ ಕಾಂಗ್ರೆಸ್ ನಾಯಕಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಕಾಲೇಜು ವಿದ್ಯಾರ್ಥಿಗಳಿಗೆ ಮತ್ತೇರಿಸೋ ‘ಟೈಡಾಲ್ ಮಾತ್ರೆ’ ಸೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್!



















