ಹುಬ್ಬಳ್ಳಿ : ನಗರದಲ್ಲಿ ಜೆಸಿಬಿಗಳು ಘರ್ಜಿಸಿದೆ. ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಅಕ್ರಮವಾಗಿ ಕಟ್ಟಿದ್ದ 47 ಮನೆಗಳನ್ನು ತೆರವು ಮಾಡಲಾಗಿದ್ದು, ಮೂಲ ದಾಖಲಾತಿ ನೋಡದೆ ಮೋಸ ಹೋಗಿ, ಮನೆ ಮನೆ ಕಟ್ಟಿಕೊಂಡವರು ಬದುಕು ಬೀದಿಗೆ ಬಂದಿದೆ.
ಹುಬ್ಬಳ್ಳಿ ನಗರದ ಉದಯನಗರದಲ್ಲಿ ಮನೆಗಳ ತೆರವು ಕಾರ್ಯ ನಡೆದಿದೆ. ಮೂಲತಃ ರಾಮರಾವ್ ಸಬನಿಸ್ ಎನ್ನುವವರಿಗೆ ಸೇರಿದ್ದ ನಿವಾಸಿಗಳನ್ನು ಸಿಕಂದರ್ ಎನ್ನುವ ವ್ಯಕ್ತಿ ತನ್ನ ಭೂಮಿ ಅಂತ ಸುಳ್ಳು ಹೇಳಿ ಜನರಿಗೆ ಮಾರಾಟ ಮಾಡಿದ್ದ. ಕಡಿಮೆ ಬೆಲೆಗೆ ನಿವೇಶನ ಪಡೆದವರು ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರು.
ಹೀಗಾಗಿ ಜಾಗ ತೆರವು ಮಾಡುವಂತೆ ನಿವೇಶನದ ಮೂಲ ಮಾಲೀಕ ರಾಮರಾವ್ ಸಬನಿಸ್ ನಿವಾಸಿಗಳಿಗೆ ಹೇಳಿದ್ದ. ಇದಕ್ಕೆ ನಿವಾಸಿಗಳು ಒಪ್ಪಿರಲಿಲ್ಲ. ಹೀಗಾಗಿ ರಾಮರಾವ್ ಕೋರ್ಟ್ ಮೆಟ್ಟಿಲು ಹತ್ತಿದ್ದ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಮರಾವ್ ಪರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ಮನೆಗಳ ತೆರವು ಕಾರ್ಯ ನಡೆದಿದೆ.
ಇದನ್ನೂ ಓದಿ : ಅಡಿಕೆ ಬೆಳೆಗಾರರ ಸಂಕಷ್ಟ ಪರಿಹರಿಸಿ | ಸಂಸತ್ತಿನಲ್ಲಿ ಧ್ವನಿ ಎತ್ತಿದ ಬಿ.ವೈ.ರಾಘವೇಂದ್ರ



















