ಸಿಲಿಕಾನ್ ಸಿಟಿಯಲ್ಲಿ ಜೆಸಿಬಿ ಮತ್ತೆ ಘರ್ಜಿಸಿದೆ. ಅನಧಿಕೃತ ಕಟ್ಟಡ ತೆರವಿಗೆ ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ. ಹೈಕೋರ್ಟ್ ಆದೇಶದಂತೆ ಅನದಿಕೃತ ಶಾಲೆ, ಆಸ್ಪತ್ರೆ, ವಾಣಿಜ್ಯ ಮಳಿಗೆಗಳು, ಉಗ್ರಾಣ ಕೊಠಡಿಗಳು ಸೇರಿದಂತೆ ಅನಧಿಕೃತ ಕಟ್ಟಡಗಳ ತೆರವು ಕಾರ್ಯ ಮಾಡಲಾಗುತ್ತಿದೆ.
ಬಾಣಸವಾಡಿಯಲ್ಲಿರುವ ಅನಧಿಕೃತ ಕಟ್ಟಡ ತೆರವನ್ನು ಬಿಡಿಎ ಹಾಗೂ ಪೊಲೀಸ್ ಅಧಿಕಾರಿಗಳಿಂದ ಕಟ್ಟಡ ತೆರವು ಕಾರ್ಯಾಚರಣೆ ಆರಂಭ ಮಾಡಲಾಗಿದೆ.


















