ಬೆಂಗಳೂರು : ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರಗೊಂಡಿದೆ. ಈ ಬಗ್ಗೆ ಜಯನಗರ ಪ್ರಾದೇಶಿಕ ಸಾರಿಗೆ ಕಛೇರಿ ಅಧಿಕಾರಿಗಳು ಅಧಿಕೃತವಾಗಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಜಯನಗರದ ಪ್ರಾದೇಶಿಕ ಸಾರಿಗೆ ಕಛೇರಿಯು ಅಂಜನಾಪುರ ಉತ್ತರಹಳ್ಳಿ ಹೋಬಳಿಯ ಜೆ.ಪಿ.ನಗರದ 9ನೇ ಹಂತದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ವಿಳಾಸಕ್ಕೆ ಸ್ಥಳಾಂತರಗೊಂಡಿದ್ದು, ಸಾರ್ವಜನಿಕರು ಇಲಾಖೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ಭೇಟಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಜನಾಪುರ ಪ್ರಾದೇಶಿಕ ಕಚೇರಿಯಿಂದ ಬಸ್ ಬಿಡುವ ಸಮಯ ವೇಳಾ ಪಟ್ಟಿ ಹೀಗಿದೆ :
ಬೆಳಿಗ್ಗೆ 09 :10, 09: 35, 10: 20, 11: 00, 11: 35 ಗಂಟೆಗೆ. ಮಧ್ಯಾಹ್ನ 12: 05, 01:05, 2:00, 3:00, 3:25, 04: 05, 04:30. ಮತ್ತು ಸಂಜೆ 05:10, 06: 15 ಗಂಟೆಗೆಳಿಗೆ.
ಕೆ.ಆರ್.ಮಾರ್ಕೆಟ್ ಬಸ್ ನಿಲ್ದಾಣದಿಂದ ಬಿಡುವ ಸಮಯ ವೇಳಾ ಪಟ್ಟಿ ಬೆಳಿಗ್ಗೆ 08: 05, 08:30, 09: 00, 10:00,10:30, 11:00, 12:00 ಗಂಟೆಗೆ.
ಮಧ್ಯಾಹ್ನ 01:00, 01:30, 02:05, 03:10 ಗಂಟೆಗೆ ಮತ್ತು ಬನಶಂಕರಿ ಟಿಟಿಎಂಸಿಯಿಂದ ಬಿಡುವ ಸಮಯ ವೇಳಾ ಪಟ್ಟಿ ಬೆಳಿಗ್ಗೆ : 09:25, 01: 45, 01: 45 ಗಂಟೆಗೆಳಿಗೆ ಬಿಬಿಎಂಟಿಸಿ ಬಸ್ ಗಳ ಸಂಪರ್ಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಾಗೂ ದೊಡ್ಡಕಲ್ಲಸಂದ್ರ ಮೊಟ್ರೋ ನಿಲ್ದಾಣದಿಂದ 3 ಕಿ.ಮೀ. ದೂರದಲ್ಲಿದ್ದು, ಸಾರ್ವಜನಿಕರು ಬಿಎಂಟಿಸಿ ಬಸ್ ಗಳ ಸಂಪರ್ಕ ಸಾರಿಗೆ ಸದುಪಯೋಗ ಪಡೆದುಕೊಳ್ಳುವಂತೆ ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಕೋರಿದೆ.
ಇದನ್ನೂ ಓದಿ : Women’s world cup 2025 | ನಾಳೆ ಭಾರತ-ಆಸೀಸ್ ಸೆಮಿಫೈನಲ್ ಫೈಟ್.. ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ



















