ನವದೆಹಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ, ಭಾರತದ ಜಾವೆಲಿನ್(Javelin of India) ತಾರೆ ನೀರಜ್ ಚೋಪ್ರಾ(Neeraj Chopra) ಅವರು ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ರಾತ್ರಿ ತಮ್ಮ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ಅವರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ನನ್ನ ಕುಟುಂಬದ ಜೊತೆಗೆ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಿದ್ದೇನೆ. ನಿಮ್ಮೆಲ್ಲರ ಹಾರೈಕೆಯು ನಮ್ಮನ್ನು ಈ ಕ್ಷಣದವರೆಗೆ ತಂದು ನಿಲ್ಲಿಸಿದೆ. ನಾವು ಈಗ ಪ್ರೀತಿಯಲ್ಲಿ ಬಂಧಿತರಾಗಿದ್ದೇವೆ. ಹಿಂದೆಂದಿಗಿಂತಲೂ ಖುಷಿಯಾಗಿದ್ದೇವೆ ಎಂದು ನೀರಜ್ ಚೋಪ್ರಾ ತಮ್ಮ ಟ್ವೀಟರ್ ಹಾಗೂ ಇನ್ ಸ್ಟಾಗ್ರಾಂ(Twitter and Instagram) ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಮದುವೆಯ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಪತ್ನಿಯ ಹೆಸರು ಹಿಮಾನಿ ಎಂದೂ ತಿಳಿಸಿದ್ದಾರೆ.
ಮದುವೆ(marriage) ಕುರಿತು ಮಾತನಾಡಿರುವ ನೀರಜ್ ಅವರ ಸಂಬಂಧಿ, ಎರಡು ದಿನಗಳ ಹಿಂದೆಯೇ ನಮ್ಮ ದೇಶದಲ್ಲೇ ಮದುವೆ ನಡೆದಿದೆ. ಅದು ಎಲ್ಲಿ ನಡೆಯಿತು ಎಂಬುದನ್ನು ನಾನು ಬಹಿರಂಗಪಡಿಸಲಾರೆ. ಈಗ ನವದಂಪತಿ ಹನಿಮೂನ್ ಗೆ ತೆರಳಿದ್ದಾರೆ ಎಂದಿದ್ದಾರೆ. ಅಲ್ಲದೆ, ಮದುಮಗಳು ಹಿಮಾನಿ ಹರ್ಯಾಣದ ಸೋನಿಪತ್ ನವರು.(Himani is Sonipat in Haryana) ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.