ಬೆಂಗಳೂರು: ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಹೇಮಂತ್ ಚಂದನಗೌಡರ್‌ರ ಏಕಸದಸ್ಯ ಪೀಠ ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.
ಅರ್ಜಿಯಲ್ಲಿ ಜತಿನ್ ಹುಕ್ಕೇರಿ, ಬಲವಂತವಾಗಿ ನನ್ನ ಪತ್ನಿ ರನ್ಯಾ ರಾವ್‌ಗೆ ವಿಚಾರಣೆ ಮಾಡುವುದು ಸರಿಯಲ್ಲ. ಪ್ರಜರಣದಲ್ಲಿ ನ್ಯಾಯಯುತವಾದ ವಿಚಾರಣೆ ನಡೆಯಬೇಕೇ ಹೊರತು, ಬಲವಂತವಾಗಿ ಕೆಲ ಸಾಕ್ಷ್ಯಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಯಬಾರದು ಎಂದು ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಸದ್ಯ ಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.