ಕಳೆದ ಚುನಾವಣೆಯಲ್ಲಿ ರಾಜಕೀಯ ಮೇಲಾಟದಲ್ಲಿ ಅಣ್ಣ ತಮ್ಮಂದಿರೇ ರಾಜಕೀಯ ವೈರಿಗಳಂತೆ ವರ್ತಿಸಿ ಚುನಾವಣೆ ಎದುರಿಸಿದ್ದರು. ರೆಡ್ಡಿ ಬ್ರದರ್ಸ್ ಒಗ್ಗಟ್ಟು ಮುರಿದು ಹೋಗಿತ್ತು. ಇದೀಗ ಗಾಲಿ ಜನಾರಂಧನ ರೆಡ್ಡಿ ನಾವೆಲ್ಲಾ ಎಂದಿಗೂ ಒಂದೇ ಎನ್ನುವ ಮೂಲಕ ಒಗ್ಜಟ್ಟಿನ ಮಂತ್ರ ಜಪಿಸಿದ್ದಾರೆ.
ಬಳ್ಳಾರಿ ನಗರ ಬಿಜೆಪಿ ಕಾರ್ಯಾಲಯದಲ್ಲಿ ನಡೆಡ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಜನಾರಂಧನ ರೆಡ್ಡಿ ನಾವು ಅಣ್ಣ ತಮ್ಮಂದಿರು ಎಂದಿಗೂ ಒಂದೇ. ಕೆಲವರು ನಮ್ಮಲ್ಲಿ ಬಿರುಕು ಮೂಡಿಸಿ ಬೇರೆಯವರು ಬೇಳೆ ಬೇಯಿಸಿ ಕೊಳ್ಳಲು ಪ್ರಯತ್ನಿಸಿದರು. ಆದರೇ ರೆಡ್ಡಿ ಬ್ರದರ್ಸ್ ಅಗಲಿಸಲು ಯಾರಿಗೂ ಸಾಧ್ಯವೇ ಇಲ್ಲ. ನಮ್ಮಲ್ಲಿನ ಪ್ರೀತಿ, ವಿಶ್ವಾಸ ಎಂದಿಗೂ ಕಡಿಮೆಯಾಗೋದಿಲ್ಲ. ನಾವೆಲ್ಲರೂ ಪ್ರೀತಿ ವಿಶ್ವಾಸದಲ್ಲಿದ್ದೇವೆ. ಮುಂದೆಯೂ ಅದೇ ರೀತಿ ಜೊತೆ ಇರಲಿದ್ದೇವೆ.’ ಎಂದು ಒಗ್ಗಟ್ಟು ಪಂರದರ್ಶಿಸಿದರು.