ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (ಯುಪಿಎಸ್‌ಸಿ) ಪರೀಕ್ಷೆ ಪಾಸಾಗಬೇಕು, ನಾಗರಿಕ ಸೇವೆ ಮಾಡಬೇಕು ಎಂದು ಬಯಸುತ್ತಿರುವವರಿಗೆ ಗುಡ್ ನ್ಯೂಸ್ ದೊರೆತಿದೆ. 2026-27ನೇ ಸಾಲಿನ ಯುಪಿಎಸ್ಸಿ (UPSC) ನಾಗರಿಕ ಸೇವೆಗಳ ಪರೀಕ್ಷೆಗಾಗಿ ಉಚಿತ ತರಬೇತಿ ನೀಡುವ ದಿಸೆಯಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಯುಪಿಎಸ್ಸಿಯ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗೆ ವಸಹಿ ಸಹಿತವಾಗಿ ಉಚಿತ ತರಬೇತಿ ನೀಡಲಾಗುತ್ತದೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ – ವಸತಿ ತರಬೇತಿ ಅಕಾಡೆಮಿ (JMI RCA)ಯು ದೇಶದ ಅತ್ಯಂತ ಯಶಸ್ವಿ ಹಾಗೂ ಉಚಿತವಾಗಿ ತರಬೇತಿ ನೀಡುವ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಉಚಿತ ವಸತಿ ಸಹಿತ ತರಬೇತಿ ನೀಡಲಾಗುತ್ತದೆ.
2 ಹಂತಗಳ ಮೂಲಕ ಆಯ್ಕೆ
ಪ್ರವೇಶ ಪರೀಕ್ಷೆ: ಇದು ದೇಶದ ಪ್ರಮುಖ ನಗರಗಳಲ್ಲಿ (ಬೆಂಗಳೂರು ಸೇರಿದಂತೆ) ನಡೆಯುತ್ತದೆ. ಇದರಲ್ಲಿ ಸಾಮಾನ್ಯ ಅಧ್ಯಯನ ಮತ್ತು ಪ್ರಬಂಧ ಬರೆಯುವ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದ ಬಳಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ಏನೆಲ್ಲ ಸೌಲಭ್ಯ ಸಿಗಲಿವೆ?
ಉಚಿತ ತರಬೇತಿ: ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದ ಮೂರೂ ಹಂತಗಳಿಗೆ ತರಬೇತಿ ನೀಡಲಾಗುತ್ತದೆ.
ವಸತಿ ಸೌಲಭ್ಯ: ಆಯ್ಕೆಯಾದವರಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಇರುತ್ತದೆ (ಊಟದ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕು).
24/7 ಲೈಬ್ರರಿ: ದೇಶದ ಅತ್ಯುತ್ತಮ ಗ್ರಂಥಾಲಯಗಳಲ್ಲಿ ಒಂದಾದ ಇಲ್ಲಿನ ಲೈಬ್ರರಿ ದಿನದ 24 ಗಂಟೆಯೂ ತೆರೆದಿರುತ್ತದೆ.
ಅಣಕು ಪರೀಕ್ಷೆಗಳು: ನಿಯಮಿತವಾಗಿ ಟೆಸ್ಟ್ ಸರಣಿಗಳನ್ನು ನಡೆಸಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: ಮಾರ್ಚ್ 18, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 24, 2026
ಪ್ರವೇಶ ಪರೀಕ್ಷೆ ನಡೆಯುವ ಅಂದಾಜು ದಿನಾಂಕ: ಜೂನ್ 2026
ಅರ್ಜಿ ಸಲ್ಲಿಸುವುದು ಹೇಗೆ?
ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅಧಿಕೃತ ವೆಬ್ ಸೈಟ್ jmicoe.in ಗೆ ಭೇಟಿ ನೀಡಿ.
‘RCA Admission Notification 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ಮತ್ತು ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ



















