ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಪಟ್ಟಣದ ಹೊರ ವಲಯದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಜನರು ಕರಡಿ ಕಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ಜಾಂಬವಂತ ಮಾತ್ರ ಜನರನ್ನು ಕಂಡರೂ ರಾಜಾರೋಷವಾಗಿ ನಗರದಲ್ಲಿ ಓಡಾಡುತ್ತಿದೆ.
ಕರಡಿ ಹೋಗುತ್ತಿರುವ ದೃಶ್ಯ ವಾಕಿಂಗ್ ತೆರಳಿದ್ದವರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ಸಾರ್ವಜನಿಕರು ಮಹಾತಿ ನೀಡಿದ್ದು, ಕರಡಿ ಸೆರೆಗೆ ಮನವಿ ಮಾಡಿದ್ದಾರೆ.