ಬೆಂಗಳೂರು: ಕಾವೇರಿ ಕನೆಕ್ಷನ್ ಪಡೆಯದ ಬೆಂಗಳೂರಿನಲ್ಲಿರುವ ಅಪಾರ್ಟ್ಮೆಂಟ್ ಗಳಿಗೆ ಜಲ ಮಂಡಳಿ ಶಾಕ್ ನೀಡಿದೆ. ನಗರದಲ್ಲಿನ ಹಲವು ಅಪಾರ್ಟ್ಮೆಂಟ್ ಗಳು ಕಾವೇರಿ ಕನೆಕ್ಷನ್ ಪಡೆದಿರಲಿಲ್ಲ. ಹೀಗಾಗಿ ಇಂತಹ ಕಟ್ಟಡಗಳಿಗೆ ಶಾಕ್ ನೀಡಿರುವ ಜಲ ಮಂಡಳಿ, ಕಾವೇರಿ ಕನೆಕ್ಷನ್ ಪಡೆಯುವುದು ಕಡ್ಡಾಯ ಮಾಡಿದೆ. ಒಂದು ವೇಳೆ ಕನೆಕ್ಷನ್ ಪಡೆಯದಿದ್ದರೆ ಈ ಬಾರಿಯ ಬೇಸಿಗೆಯಲ್ಲಿ ಜಲ ಮಂಡಳಿಯಿಂದ ನೀರು ಸಿಗುವುದಿಲ್ಲ ಎಂದು ಸೂಚಿಸಲಾಗಿದೆ.
ನಗರದಲ್ಲಿ ಕಳೆದ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಿತ್ತು. ಹೀಗಾಗಿ ಜಲ ಮಂಡಳಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಆದರೆ, ಈ ಬಾರಿ ಕಾವೇರಿ ಕನೆಕ್ಷನ್ ಪಡೆದರೆ ಮಾತ್ರ ಟ್ಯಾಂಕರ್ ನೀರು ಸರಬರಾಜು ಮಾಡಲಾಗುವುದು ಎಂದು ಜಲ ಮಂಡಳಿ ಸೂಚಿಸಿದೆ ಈಗಾಗಲೇ ಬೆಂಗಳೂರು ಹೊರ ವಲಯಕ್ಕೆ ಕಾವೇರಿ ನೀರಿನ ಸಂಪರ್ಕ ಕೊಡಲಾಗುತ್ತಿದೆ. ಈ ಬಗ್ಗೆ ಕಾನೂನು ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾಪಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ