ರಾಜ್ಯದಲ್ಲಿ ದೊಡ್ಡ ಬಿರುಗಾಳಿ ಬೀಸಿದ ಸುದ್ದಿ ಅಂದ್ರೆ ದರ್ಶನ್- ರೇಣುಕಾಸ್ವಾಮಿ ಕೊಲೆ ಪ್ರಕರಣ. ಗೆಳತಿ ಪವಿತ್ರಾಗೌಡಗೆ ಈ ಪ್ರಕರಣದಲ್ಲಿ ಒಟ್ಟು 17 ಜನರನ್ನು ಪೊಲೀಸ್ ಹಿಡಿದಾಕಿದ್ದಾರೆ. ನಾಲ್ಕು ಮಂದಿ ತುಮಕೂರು ಜೈಲಿನಲ್ಲಿ, ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 13 ಮಂದಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದಿನದಿಂದ ದಿನಕ್ಕೆ ತನಿಖೆ ಕಠಿಣವಾಗುತ್ತಿದ್ದು. ಈ ಸಮಯದಲ್ಲಿ ನಟ ದರ್ಶನ್ಗೆ ಜೈಲೂಟದಿಂದ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗ್ತಿದೆಯಂತೆ. ಹೌದು. ಹೀಗಾಗಿ ಸಾಹೇಬ್ರು ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ಬೇಡ್ತಿದಾರೆ.
ಊಟ ಮಾತ್ರವಲ್ಲ ಹಾಸಿಗೆ ಹಾಗೂ ಪುಸ್ತಕ ತರಿಸಿಕೊಳ್ಳಲು ಕೋರಿದ್ದಾರೆ ಎನ್ನಲಾಗಿದೆ. ದರ್ಶನ್ ಪರ ವಕೀಲರು ಸಲ್ಲಿಸಿರುವ ರಿಟ್ ಅರ್ಜಿ ಅನೇಕರ ಕೈ ಸೇರಿದೆ. ಈ ಅರ್ಜಿಯಲ್ಲಿ ಮನೆಯಲ್ಲಿ ತಯಾರಿಸಿರುವ ಊಟ, ಬಟ್ಟೆ, ಚಮಚ, ಹಾಸಿಗೆ ಮತ್ತು ಪುಸ್ತಕಗಳು..ಇದ್ಯಾವುದನ್ನು ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಅಲ್ಲದೆ ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್ಗೆ ಅಜೀರ್ಣವಾಗಿದೆ ಊಟ ಸೇವಿಸಲು ಅತಿಸಾರವಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜೈಲಿನಲ್ಲಿ ನೀಡುತ್ತಿರುವ ಆಹಾರದಿಂದ ದರ್ಶನ್ಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ ಎಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಇದರಿಂದ ದರ್ಶನ್ ತುಂಬಾ ತೂಕ ಕಡಿಮೆಯಾಗಿದೆ ಎನ್ನಲಾಗಿದೆ. ಜೈಲು ಅಧಿಕಾರಿಗಳ ನಿರಾಕರಣೆ ಕಾಣೂನುಬಾಹಿರ. ಹೀಗೇ ಮುಂದುವರೆದರೆ ದರ್ಶನ್ ತೂಕ ಕಳೆದುಕೊಳ್ಳಬಹುದು ಇದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈ ಕೋರ್ಟ್ ಮುಂದೆ ಮನವಿ ಮಾಡೋದು ಹೊರತು ಪಡಿಸಿ ಮತ್ತೊಂದು ದಾರಿ ಇಲ್ಲ. ಹೀಗಾಗಿ ದರ್ಶನ್ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಕಳೆದ 20 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನ ಊಟ ತಿನ್ನುತ್ತಿರುವ ನಟ ದರ್ಶನ್ಗೆ ಊಟ ಒಗ್ಗಿಕೊಳ್ಳದೇ ವಾಂತಿ, ಭೇದಿ ಶುರುವಾಗಿದ್ದು, ದೇಹದ ತೂಕವೂ ಇಳಿಕೆಯಾಗಿದೆ. ಹೀಗಾಗಿ, ಮನೆ ಊಟಕ್ಕೆ ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ಅರ್ಜಿ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ಇನ್ನೂ ಒಂದು ವಾರ ನಟ ದರ್ಶನ್ಗೆ ಮನೆ ಊಟ ತಿನ್ನುವ ಭಾಗ್ಯವಿಲ್ಲ.
ದರ್ಶನ್ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ ? ಎಂದು ಜೈಲಿನ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಈ ಬಗ್ಗೆ ತನಿಖಾಧಿಕಾರಿಗಳು ಹಾಗೂ ಜೈಲಿನ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕು ಎಂದು ನೋಟೀಸ್ ಜಾರಿ ಮಾಡಿದರು. ಜೊತೆಗೆ, ನಟ ದರ್ಶನ್ಗೆ ಮನೆಯ ಊಟ ತರಿಸಿಕೊಳ್ಳಲು ಆಕ್ಷೇಪಣೆ ಸಲ್ಲಿಸುವಂತೆ ಎಸ್ಪಿಪಿ ಪ್ರಸನ್ನ ಕುಮಾರ್ಗೆ ಸೂಚನೆ ನೀಡಿದರು. ನಂತರ, ಅರ್ಜಿ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿಕೆ ಮಾಡಿದರು. ಇನ್ನು ಮನೆಯ ಊಟ, ಮೆತ್ತನೆಯ ಹಾಗೂ ಶುಭ್ರ ಹಾಸಿಗೆ ಹಾಗೂ ಜೈಲಿನಲ್ಲಿ ಸಮಯ ಕಳೆಯಲು ಅನುಕೂಲ ಆಗುವಂತೆ ತಮಗಿಷ್ಟದ ಪುಸ್ತಕಗಳನ್ನು ತರಿಸಿಕೊಂಡು ಓದಲು ಅವಕಾಶ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ನಟ ದರ್ಶನ್ಗೆ ತೀವ್ರ ನಿರಾಸೆ ಉಂಟಾಗಿದೆ. ಮಾಡಿದ ತಪ್ಪಿಗೆ ದರ್ಶನ್ ಇನ್ನೂ