ಬೆಂಗಳೂರು: ಗೋಲ್ಡ್ ಚೆ0ಲುವೆಯ ಜಾಮೀನು ಅರ್ಜಿ ವಜಾಗೊಂಡಿದ್ದು, ಮತ್ತೆ ಜೈಲು ಗತಿ ಎನ್ನುವಂತಾಗಿದೆ.
ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ವಜಾಗೊಂಡಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯವು ರನ್ಯಾ ರಾವ್ ಜಾಮೀನು ಅರ್ಜಿಯನ್ನು ತಿರಸ್ಕೃತ ಮಾಡಿ ಆದೇಶ ಹೊರಡಿಸಿದೆ.
ಡಿಆರ್ ಐ ಪರ ವಕೀಲರು, ರನ್ಯಾಳಿಗೆ ಇಂಟರ್ ನ್ಯಾಷನಲ್ ಲಿಂಕ್ ಇದೆ. ಹೊರ ಬಂದರೆ ಸಾಕ್ಷಿಗಳನ್ನು ಹೆದರಿಸುವ ಪ್ರಯತ್ನ ಮಾಡುತ್ತಾರೆ. ರನ್ಯಾಳಿಂದ 38 ಪರ್ಸೆಂಟ್ ಸುಂಕ ವಂಚನೆಯಾಗಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ವಾದಿಸಿದರು.
ವಾದ-ವಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವನಾಥ್ ಸಿ. ಗೌಡರ್, ಜಾಮೀನು ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ರನ್ಯಾ ಪರ ವಕೀಲರು, ಸೆಷನ್ಸ್ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನೊಂದೆಡೆ 2 ನೇ ಆರೋಪಿ ತರುಣ್ ರಾಜ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಡಿಆರ್ ಐ ಪರ ವಕೀಲರು ನಾಳೆ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ.