ಬಿಗ್ಬಾಸ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟ ಬಳಿಕ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ದೊಡ್ಮನೆಯೊಳಗೆ ಕಾಲಿಟ್ಟ ತಕ್ಷಣ ಇತರೆ ಸ್ಪರ್ಧಿಗಳ ಬಗ್ಗೆ ಇವರು ನೀಡಿರುವ ಅಭಿಪ್ರಾಯ ಮನೆಯಲ್ಲಿ ಹಲ್-ಚಲ್ ಎಬ್ಬಿಸಿದೆ. ಹೆಚ್ಚಿನ ಸ್ಪರ್ಧಿಗಳು ತಮ್ಮನ್ನ ತಾವು ಸರಿಪಡಿಸಲು ಮುಂದಾಗುತ್ತಿದ್ದಾರೆ. ಆದರೆ, ಅಶ್ವಿನಿ ಗೌಡ ಮತ್ತು ಜಾಹ್ನವಿ ಅದೇ ಹಳೇ ಚಾಳಿ ಮುಂದುವರೆಸಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಮ್ಯೂಟೆಂಟ್ ರಘು ಮತ್ತು ರಿಷಾ ಆಡಿದ ಮಾತಿಗೆ ಬೆಲೆಯೇ ಕೊಟ್ಟಿಲ್ಲ.
ಇದನ್ನ ಗಮನಿಸಿದ ರಿಷಾ ಅವರು ಜಾಹ್ನವಿಯನ್ನು ಸಪರೇಟ್ ಆಗಿ ಕರೆದು ಅವರಿಗೆ ತಮ್ಮ ತಪ್ಪಿನ ಕುರಿತು ಅರಿವು ಮೂಡಿಸಿದ್ದಾರೆ. ಇದರಿಂದ ಬೇಸರಗೊಂಡ ಜಾಹ್ನವಿ ಗಳಗಳನೆ ಕಣ್ಣೀರಿಟ್ಟಿದ್ದಾರೆ. ಹುಕ್ಕ ಥರ ಇದ್ದರೆ ಜಾನ್ವಿ ಕಳೆದು ಹೋಗ್ತಾರೆ. ಸಾಕಷ್ಟು ಕೆಲಸ ಮಾಡಬೇಕು ಎಂದು ಕನಸು ಕಂಡು ಬಂದಿರ್ತೀರಾ. ನಿಮಗೆ ನೀವೇ ಮುಳ್ಳಾಗ್ತಿದ್ದೀರಾ ಎಂದು ನೇರವಾಗಿ ಹೇಳಿದ್ದಾರೆ.
ರಿಷಾ ಮಾತಿನಿಂದ ಜಾಹ್ನವಿಗೆ ಭಯ ಶುರುವಾಗಿದೆ. ಹೊರಗಡೆ ನಾನು ತುಂಬಾ ನೆಗೆಟಿವ್ ಆಗಿ ಕಾಣಿಸುಕೊಂಡಿದ್ದೇನೆ ಎಂದು ಅನಿಸತೊಡಗಿದೆ. ನಮ್ಮ ಗುಂಡಿ ನಾವೇ ತೋಡಿಕೊಂಡ್ವಿ ಎನಿಸುತ್ತದೆ. ಹೊರಗಡೆ ಹೋಗುವಾಗ ನೆಗೆಟಿವಿಟಿ ಮಾಡ್ಕೊಂಡು ಹೋದರೆ? ಎಂದು ಜಾಹ್ನವಿ ಅಶ್ವಿನಿ ಬಳಿ ಹೇಳಿದ್ದಾರೆ. ಅದಕ್ಕೆ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿದ್ದವರು ಯಾರು ತಪ್ಪೇ ಮಾಡಿಲ್ವಾ? ನಮ್ಮ ವ್ಯಕ್ತಿತ್ವ ಅದಲ್ಲ. ಹೊರಗಡೆ ಬನ್ನಿ ಎಂದಿದ್ದಾರೆ.
ಇಷ್ಟೆಲ್ಲ ಹೇಳಿದ ಬಳಿಕ ಕೂಡ ಜಾಹ್ನವಿ ಸರಿ ಆದಂತೆ ಕಾಣುತ್ತಿಲ್ಲ. ಬಳಿಕ ರಿಷಾ ಅವರು, ನಾವು ಹೇಳಿ ಕೂಡ ಇವರು ದಡ್ಡರಾದರೆ, ಇವರು ರಿಯಲ್ ದಡ್ಡರು ಎಂದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ರಿಷಾ ಜಾಹ್ನವಿ ಅವರಿಗೆ ಬಿಗ್ ಬಾಸ್ ಮನೆಗೆ ಬಂದಿರುವ ಉದ್ದೇಶ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದನ್ನ ಅವರು ಯಾವರೀತಿ ತೆಗೆದುಕೊಳ್ಳುತ್ತಾರೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.