ಭುವನೇಶ್ವರ: ವಿದೇಶಿ ಯುವತಿಯ ತೊಡೆಯ ಮೇಲೆ ಭಗವಾನ್ ಜಗನ್ನಾಥನ ಟ್ಯಾಟೂ (Jagannath Tattoo) ಬಿಡಿಸಿದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಟ್ಯಾಟೂ ಪಾರ್ಲರ್ ಮಾಲೀಕ ರಾಕಿ ರಂಜನ್ ಬಿಸೋಯ್ ಮತ್ತು ಕಲಾವಿದ ಅಶ್ವಿನಿ ಕುಮಾರ್ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Italian Woman's Tattoo of Deity Sparks Outrage from Hindu Devotees
— RT_India (@RT_India_news) March 4, 2025
A case has been filed against the parlour after the owner posted a picture online of the Lord Jagannath tattoo positioned on an Italian woman's thigh. A complaint was made stating it hurts "religious sentiments."… pic.twitter.com/iJY2FgxQlF
ಸಾಮಾಜಿಕ ಮಾಧ್ಯಮದಲ್ಲಿ ಟ್ಯಾಟೂ ವಿಡಿಯೊ ವೈರಲ್ ಆದ ನಂತರ, ಜಗನ್ನಾಥನ ಭಕ್ತರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಕ್ತರ ದೂರುಗಳ ಆಧಾರದ ಮೇಲೆ, ಸಾಹಿದ್ ನಗರ ಪೊಲೀಸರು ಮಾ.3 (ಸೋಮವಾರ) ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದರು.
ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (IPC) ಸೆಕ್ಷನ್ 299 ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ, ಇದರಲ್ಲಿ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಕೆಣಕುವ ಕೃತ್ಯಗಳು ಅಪರಾಧವೆಂದು ಪರಿಗಣಿಸಲಾಗಿದೆ.
ಕಲಾವಿದನ ಹೇಳಿದ್ದೇನು?
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕಲಾವಿದ ಅಶ್ವಿನಿ ಕುಮಾರ್ ತಪ್ಪೊಪ್ಪಿಕೊಂಡಿದ್ದು, ಯುವತಿ ಒತ್ತಾಯಪೂರ್ವಕವಾಗಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಭಗವಾನ್ ಜಗನ್ನಾಥನ ಚಿತ್ರ ಬಿಡಿಸಬೇಡವೆಂದು ಸಲಹೆ ನೀಡಿದರೂ, ಯುವತಿ ಕೇಳಿರಲಿಲ್ಲ ಎಂದು ಅಶ್ವಿನಿ ಕುಮಾರ್ ಸ್ಪಷ್ಟಪಡಿಸಿದ್ದಾನೆ.
ಯುವತಿಯ ಯಾರು?
ವಿವಾದಕ್ಕೀಡಾದ ವಿದೇಶಿ ಯುವತಿ ಇಟಲಿಯ ಪ್ರಜೆ ಆಗಿದ್ದು, ಭುವನೇಶ್ವರದಲ್ಲಿ ಒಂದು ಎನ್ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ವರದಿಯಾಗಿದೆ. ಈ ವಿಚಾರದಲ್ಲಿ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: PM Modi: ವನತಾರಾಗೆ ಪ್ರಧಾನಿ ಮೋದಿ ಭೇಟಿ: ಪ್ರಾಣಿಗಳೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್
ಹಿಂದೂ ಸಂಘಟನೆಗಳ ಆಕ್ರೋಶ
ಜಗನ್ನಾಥನ ಹಚ್ಚೆ ಸಂಬಂಧ ಹಿಂದೂ ಸಂಘಟನೆಗಳು ಹಾಗೂ ಭಕ್ತರು ಭುವನೇಶ್ವರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಗನ್ನಾಥನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡಲಾಗಿದೆ ಎಂದು ಆರೋಪಿಸಿ, ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆ
ವಿವಾದದ ನಂತರ, ಯುವತಿ ಮತ್ತು ಪಾರ್ಲರ್ ಮಾಲೀಕ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ತಮ್ಮ ತಪ್ಪನ್ನು ಅರಿತುಕೊಂಡು, ಕೈಗಳನ್ನು ಜೋಡಿಸಿ ಜನರಲ್ಲಿ ಕ್ಷಮೆ ಕೋರುತ್ತಿರುವ ವಿಡಿಯೊ ವೈರಲ್ ಆಗಿದೆ.
“ನಾನು ಭಗವಾನ್ ಜಗನ್ನಾಥನ ನಿಜವಾದ ಭಕ್ತೆ. ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ತಪ್ಪು ಮಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ.” ಎಂದು ಹೇಳಿದ್ದಾಳೆ.
ಆಕೆ ಇನ್ನೂ “ಜಗನ್ನಾಥನ ಟ್ಯಾಟೂ ಅನ್ನು ಯಾರಿಗೂ ಕಾಣದ ಸ್ಥಳದಲ್ಲಿ ಹಾಕಲು ಕೇಳಿದ್ದೆ. ವಿವಾದ ಉಂಟುಮಾಡುವ ಉದ್ದೇಶ ನನಗೆ ಇರಲಿಲ್ಲ. ಹಚ್ಚೆಯ ಗಾಯ ವಾಸಿಯಾದ ಬಳಿಕ ಅದನ್ನು ತೆಗೆದುಹಾಕುತ್ತೇನೆ,” ಎಂದು ಆಕೆ ಹೇಳಿದ್ದಾರೆ.