ಶಿವಮೊಗ್ಗ : ಮೈಸೂರು ದಸರಾ ಈ ಬಾರಿ ತುಂಬಾ ವಿವಾದಾತ್ಮಕ ಚರ್ಚೆಯಾಗುತ್ತಿದೆ. ಬಾನು ಮುಷ್ತಾಕ್ ಸಾಹಿತಿಯಾಗಿ ಅವರ ಬಗ್ಗೆ ನಮಗೆ ಗೌರವವಿದೆ. ಕನ್ನಡದ ಬಗ್ಗೆ, ಚಾಮುಂಡೇಶ್ವರಿಯ ಬಗ್ಗೆ, ಹಿಂದೆ ಅವರು ಮಾತನಾಡಿದ ರೀತಿ ಇಂದು ಪ್ರಶ್ನಾರ್ಹವಾಗಿದೆ. ಈ ದೃಷ್ಟಿಯಿಂದ ಸರ್ಕಾರ ಆಲೋಚನೆ ಮಾಡಬೇಕು ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ಚಾಮುಂಡಿ ಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂದು ಹೇಳುವ ಮನಸ್ಥಿತಿ ಇರುವ ಸರ್ಕಾರ, ಹಿಂದೂಗಳ ಬಗ್ಗೆ ಪೂರ್ವಾಗ್ರಹ ಪೀಡಿತವಾದ ಸರ್ಕಾರ ಈ ರಾಜ್ಯದಲ್ಲಿ ಇದೆ ಎನ್ನುವುದೇ ನಮ್ಮ ದುರದೃಷ್ಟಕರ ಸಂಗತಿ ಎಂದಿದ್ದಾರೆ.
ಧರ್ಮದ ಬಗ್ಗೆ ಈ ರೀತಿ ಹೇಳುವುದು ಸರಿಯಲ್ಲ ಇದೊಂದು ತುಷ್ಟಿಕರಣ ಆಗುತ್ತದೆ. ದಸರಾ ಯಾವುದೇ ವಿವಾದಗಳಿಲ್ಲದೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.