ಕಲಬುರಗಿ: ಮಹಿಳೆಯೊಬ್ಬರಿಗೆ ಸಿ.ಟಿ. ರವಿಯಿಂದ ಅನ್ಯಾಯವಾಗಿದೆ. ಇದು ಮನುಸ್ಮೃತಿ , ಆರೆಸ್ಸೆಸ್ ಶಾಖಾ ತರಬೇತಿ ಎಂಬುವುದನ್ನು ತೋರಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಂದ ಸುಳ್ಳನ್ನು ಹೇಗೆ ಸತ್ಯ ಮಾಡಬೇಕು ಎಂಬುವುದನ್ನು ಕಲಿಯಬೇಕು. ಸಿ.ಟಿ. ರವಿ ಹೇಳಿಕೆ ಗಮನಿಸಿದರೆ ಅದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ಬಿಜೆಪಿ ದೀಪ ಹಚ್ಚುವ ಕೆಲಸ ಮಾಡುವುದಿಲ್ಲ. ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ಗುಡುಗಿದ್ದಾರೆ.
ಎಫ್‌ಎಸ್‌ಎಲ್ ರಿಪೋರ್ಟ್ ಬಂದಾಗ ಇವರ ಬಣ್ಣ ಬಯಲಿಗೆ ಬರುತ್ತದೆ. ಸಿಟಿ ರವಿ ಪದ ಬಳಕೆಗೆ ಹಾಳು ಮನಸ್ಥಿತಿಯ ಬಿಜೆಪಿಯವರೆಲ್ಲ ಒಂದಾಗಿ ಬೆಂಬಲ ಸೂಚಿಸಿದ್ದಾರೆ. ಒಬ್ಬನೇ ಒಬ್ಬ ನಾಯಕ ಈ ಹೇಳಿಕೆಯನ್ನು ಖಂಡಿಸಿಲ್ಲ ಎಂದು ಗುಡುಗಿದ್ದಾರೆ.
ಅಮಿತ್ ಶಾಗೆ ಹುಚ್ಚು ನಾಯಿ ಕಚ್ಚಿದೆ. ಇವರಿಗೆ ಏನ್ ಸಮಸ್ಯೆ ಅಂದ್ರೆ ಇವರ ಆಲೋಚನೆಯಲ್ಲಿ ಅಂಬೇಡ್ಕರ್ ಇಲ್ಲ ಸಾಮಾಜಿಕ ಸಮಾನತೆ ಇಲ್ಲ ಎಂದು ಗುಡುಗಿದ್ದಾರೆ.