ಬೆಂಗಳೂರು : ಸೆಪ್ಟೆಂಬರ್ 22ರಿಂದ ನೂತನ ಜಿಎಸ್ಟಿ ದರ ಜಾರಿಗೆ ಬರಲಿದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಪರ – ವಿರೋಧ ಚರ್ಚೆ ಶುರುವಾಗಿದೆ.
ಈ ಕುರಿತು ಸಚಿವ ಆರ್ .ಬಿ ತಿಮ್ಮಾಪೂರ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ನಷ್ಟ ಆಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವು ವಿಚಾರದಲ್ಲಿ ಜಿಎಸ್‌ಟಿ ಕಡಿಮೆ ಆಗಿದೆ. ಅದೇನೂ ದೊಡ್ಡ ಬಂಪರ್ ಅಲ್ಲ, ಕೊಡುಗೆನೂ ಅಲ್ಲ. ಮೊದಲು ಇವರು ಜಿಎಸ್‌ಟಿ ಹಾಕಿದ್ದೇ ತಪ್ಪು. ಈಗ ಅದನ್ನು ತೆಗೆದಿದ್ದೇವೆ ಎನ್ನುವುದು ಹಾಸ್ಯಾಸ್ಪದ ಎಂದಿದ್ಧಾರೆ.
ಜನರಿಗೆ ದಾರಿ ತಪ್ಪಿಸುವ ಕೆಲಸ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ. ನಮ್ಮ ಜಿಎಸ್ ಟಿ ಹಣವನ್ನೇ ಇವರು ನೀಡಿಲ್ಲ. ಧರ್ಮ ಇಟ್ಟು ಪ್ರಸ್ತಾಪ ಮಾಡುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ಏನು ಮಾಡಲ್ಲ. ಇಲ್ಲಿಯವರೆಗೂ ಒಂದೇ ಒಂದು ಡ್ಯಾಂ ಕೂಡ ಕಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.