ದಾವಣಗೆರೆ: ಅನ್ನ ರಾಮಯ್ಯ ಅಂತಾ ಹೇಳ್ತಿದ್ದಾರೆ ಎಲ್ಲಿಂದ ಅಕ್ಕಿ ತರ್ತಿದ್ದಾರೆ. ಕೇಂದ್ರದ ಅಕ್ಕಿ ಹಿಡಿದು ನಾನು ಅನ್ನ ರಾಮಯ್ಯ ಅಂದ್ರೆ ಯಾರು ಒಪ್ಪುತ್ತಾರೆ. ಸಾಲರಾಮಯ್ಯ ಅಲ್ಲ ಕಳ್ಳ ರಾಮಯ್ಯ ಅನ್ನೋದು ಸರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ, ಈಗಾಗಲೇ ಕೊನೆಯ ಹಂತಕ್ಕೆ ಉಪ ಚುನಾವಣಾ ಪ್ರಚಾರ ಬರ್ತಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಾಜ್ಯದ ಎಲ್ಲಾ ಮಂತ್ರಿಗಳನ್ನು ಪ್ರಚಾರಕ್ಕೆ ನಿಯೋಜಿಸಿದ್ದಾರೆ. ಬೆಂಗಳೂರು ವಿಧಾನಸೌಧ ಸಂಪೂರ್ಣ ಖಾಲಿಯಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಸಚಿವರ ನಿಯೋಜನೆಗೆ ಟೀಕೆ ಮಾಡಲ್ಲ, ಆದ್ರೆ ರಾಜ್ಯದ ಸಿಎಂ ಈ ರಾಜ್ಯ ಸುಭಿಕ್ಷೆಯಿಂದ ಇರಲು ಸರ್ಕಾರದ ಸಾಧನೆ ಬಗ್ಗೆ ಹೇಳ್ತಿದ್ದಾರೆ.ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳುತ್ತಿದ್ದಾರೆ. ಈ ಐದು ಗ್ಯಾರಂಟಿ ಬಂಡವಾಳ ಹೊರತುಪಡಿಸಿ ಮೂರು ವರ್ಷಗಳಲ್ಲಿ ಯಾವುದೇ ಸಾಧನೆ ಆಗಿಲ್ಲ. ರಾಜ್ಯದಲ್ಲಿ ಗ್ಯಾರಂಟಿ ಸ್ಕೀಮ್ ಬಿಟ್ಟು ಬೇರೆ ಸಾಧನೆ ನೋಡಲು ಸಾಧ್ಯವಿಲ್ಲಎಂದಿದ್ದಾರೆ.
ಇನ್ನು, ಅಮೆರಿಕ ಇಸ್ರೇಲ್ ಇರಾನ್ ಯುದ್ಧ ನಡೀತಿದೆ. ಈ ವೇಳೆ ಆಟೋ ಡ್ರೈವರ್‌ಗಳಿಗೆ ಎಲ್‌ಪಿಜಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರು ನರೇಂದ್ರ ಮೋದಿ ಕೊಡಬೇಕು ಅವರು ಜವಾಬ್ದಾರಿ ನಿರ್ವಹಣೆ ಮಾಡ್ತಿಲ್ಲ ಅಂತ ಆರೋಪಿಸುತ್ತಾರೆ ಎಂದು ಗುಡುಗಿದ್ದಾರೆ.
ಯಾವ ರೀತಿ ಸಿಲಿಂಡರ್ ಕೊಡಬೇಕು ಸಲಹೆ ಕೊಡ್ರಪ್ಪಾ ನೋಡೋಣ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮೋದಿಯವರು ಬೇರೆ ದೇಶಗಳ ಜೊತೆ ಇಟ್ಟುಕೊಂಡ ಸಂಬಂಧ ಹಿನ್ನೆಲೆ ಪ್ರತಿನಿತ್ಯ ಶ್ರಮ ಪಡುತ್ತಿದ್ದಾರೆ ಹಾರ್ಮೋಜ್ ಜಲಸಂಧಿ ಬೇರೆ ದೇಶಗಳ ಹಡುಗು ಮೂವ್ ಮೆಂಟ್ ಸಾಧ್ಯವಿಲ್ಲ ಅಂತಹ ಸಂದರ್ಭಸಲ್ಲಿ ನಮ್ಮ ದೇಶದ ಹಡಗು ಸಾಗಾಟಕ್ಕೆ ಅನುಮತಿ ತಂದಿದ್ದಾರಲ್ಲ ಕನಿಷ್ಟ ಸೌಜನ್ಯ ಇಲ್ಲವಾ? ಎಂದು ಕಿಡಿಕಾರಿದ್ದಾರೆ.
ಸಿಎಂ, ಡಿಸಿಎಂ, ಸುರ್ಜೇವಾಲಾ ಏನೇನೋ ಹೇಳ್ತಿದ್ದಾರೆ.ಆದರೆ ಕೇಂದ್ರದ ಅಕ್ಕಿ ಹಿಡಿದು ನಾನು ಅನ್ನ ರಾಮಯ್ಯ ಅಂದ್ರೆ ಯಾರು ಒಪ್ಪುತ್ತಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಸಬೇಕು ಎಂದು ನೋಡಿ ಕೆಲಸ ಮಾಡಿ. ಈ ರಾಜ್ಯದಲ್ಲಿ ಲೂಟಿ ಮಾಡೋದು ಬಿಟ್ಟು ಏನ್ ಮಾಡಿದೀರಿ. ಅಧಿಕಾರಿಗಳ ನಿಯುಕ್ತಿಗೆ ಎಷ್ಟೆಷ್ಟು ಫಿಕ್ಸ್ ಮಾಡಿಕೊಂಡಿದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.



















