ಚನ್ನಪಟ್ಟಣ: ಮತದಾರರು ಹೃದಯದಲ್ಲಿ ಸ್ಥಾನ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚುನಾವಣೆ ಘೋಷಣೆಯಾದಾಗ ನನಗೆ ಉಪ ಚುನಾವಣೆ ಅಭ್ಯರ್ಥಿಯಾಗುವ ಕುರಿತು ಭಾವನೆಗಳು ಇರಲಿಲ್ಲ. ಆದರೆ, ಕೆಲ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ಭಾವನೆಗಳು ಬೆಲೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಿಸುವುದಕ್ಕೆ ನಾನೇ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಮೈತ್ರಿ ಮುಖಂಡರು ಹಾಗೂ ಕಾರ್ಯಕರ್ತರು ಸತತ ಹದಿನೆಂಟು ದಿನ ನನ್ನ ಪರವಾಗಿ ಒಂದು ಕ್ಷಣವು ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಅನಂತ ಅನಂತ ಧನ್ಯವಾದಗಳ ಎಂದು ಹೇಳಿದ್ದಾರೆ.
ನಾನು ಮತದಾರರ ವಿಶ್ವಾಸ ಮೀರಿ ಸೇವೆ ಮಾಡುವ ದೃಢ ನಿರ್ಧಾರ ಮಾಡಿದ್ದೇನೆ. ಚನ್ನಪಟ್ಟಣದಲ್ಲಿ ಯುವ ಸಮುದಾಯ ಬಹಳ ದೊಡ್ಡ ಮಟ್ಟದಲ್ಲಿದೆ. ನಾನು ಹಳ್ಳಿಗಳಿಗೆ ಹೋದ ಸಂದರ್ಭದಲ್ಲಿ ಅಣ್ಣ- ತಮ್ಮಂದಿರಂತೆ ನನ್ನೊಂದಿಗೆ ಹೆಜ್ಜೆ ಹಾಕಿ ಪ್ರಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.