ಕೊಪ್ಪಳ: ಮೋದಿ ಟ್ರಂಪ್ ಗೆಳೆತನದಿಂದಲೇ ಅಡುಗೆ ಅನಿಲ ಕೊರತೆ ಎನ್ನುವುದು ತಲೆಕೆಟ್ಟವರ ಮಾತು ಎಂದು ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಸಚಿವ ಬೋಸರಾಜು ಅವರ ಹೇಳಿಕೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ್ ರೆಡ್ಡಿ, ಪ್ರಧಾನಿ ಮೋದಿ- ಟ್ರಂಪ್ ಅಧ್ಯಕ್ಷರೊಂದಿಗೆ ಗೆಳೆತನವೇ ಅಡುಗೆ ಅನಿಲ ಕೊರತೆ ಕಾರಣ ಎನ್ನುವುದು ಸರಿಯಲ್ಲ. ಈ ಬಗ್ಗೆ ಸಚಿವ ಬೋಸರಾಜು ತಿಳಿದುಕೊಂಡು ಮಾತನಾಡಬೇಕು ಎಂದಿದ್ದಾರೆ.
ಇರಾನ್‌ನಿಂದ ತೈಲ ಹಡುಗುಗಳು ಬರ್ತಾ ಇವೆ. ಇರಾನ್‌ನವರು ಭಾರತ ಹಡುಗುಗಳಿಗೆ ತೊಂದರೆ ಮಾಡಬಾರದು ಎಂದಿದ್ದಾರೆ. ಬೇರೆ ದೇಶಕ್ಕೆ ತೈಲ ರವಾನೆಯಾಗುವಾಗ ದಾಳಿಯಾಗುತ್ತಿವೆ. ಆದರೆ ಭಾರತದ ಹಡುಗುಗಳು ಬರುತ್ತಿವೆ. ಯುದ್ದ ಮುಂದುವರಿದರೆ ಇನ್ನಷ್ಟು ಗಂಭೀರವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು, ತುಂಗಭದ್ರಾ ಕ್ರೇಸ್ಟ ಗೇಟ್ ಅಳವಡಿಕೆ ಮಾಡುತ್ತಿರುವುದು ಸಮಾಧಾನಕರ. ಇದೇ ವೇಳೆ ಕಾಲುವೆಗಳ ದುರಸ್ತಿ ಮಾಡಿದ್ದರೆ ಕಾಲುವೆ ಒಡೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಆನೆಗೊಂದಿ ಉತ್ಸವ ನಡೆಸುವ ಬಗ್ಗೆ ಸದನದಲ್ಲಿ ಕೇಳಿದ್ದೇನೆ. ಶಿವರಾಜ ತಂಗಡಗಿ ಅಧಿವೇಶನದ ನಂತರ ದಿನಾಂಕ ಘೋಷಣೆ ಮಾಡ್ತೀನಿ ಎಂದಿದ್ದಾರೆಕಾದು ನೋಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ಬಾರಿ ದಾವಣಗೆರೆಯಲ್ಲಿ ಬಿಜೆಪಿ ಭಾವುಟ ಹಾರಿಸ್ತೇವೆ : ಬಸವರಾಜ್ ಬೊಮ್ಮಾಯಿ



















