ಐಟಿ, ಇಡಿ,ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಕಳೆದ 10 ವರ್ಷಗಳಿಂದ ಎಷ್ಟು ದಾಳಿ ಯಾರ ಮೇಲಾಗಿದೆ? ಐಟಿ, ಇಡಿಯನ್ನು ಪೊಲಿಟಿಕಲ್ ಟೂಲ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ವಿರುದ್ಧ ಮಾತಾಡುವವರ ಮೇಲೆ ದಾಳಿ ಆಗುತ್ತಿದೆ. ಹೀಗಾಗಿಯೇ ಶಾಸಕ ಸುಬ್ಬಾರೆಡ್ಡಿ ಅವರ ಮನೆ ಮೇಲೆ ಇಡಿ ದಾಳಿ ನಡೆದಿದೆ. ನಿಮ್ಮವರದೇ ಡಾಟಾ. ಪಕ್ಷದವರ ಮೇಲೆ ಇವರದು ಅಟ್ಟಹಾಸ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.