ಬೆಂಗಳೂರು: ಐಟಿ ಸಿಟಿ ಬೆಂಗಳೂರು ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಆದರೆ ಈ ಬಾರಿ ಅಭಿವೃದ್ಧಿಯ ಕಾರಣಕ್ಕೆ ಅಲ್ಲ, ಭಾರೀ ಟ್ರಾಫಿಕ್ ಸಮಸ್ಯೆಗಾಗಿ. ನ್ಯಾವಿಗೇಶನ್ ಕಂಪನಿ ಟಾಮ್ ಟಾಮ್ ಬಿಡುಗಡೆ ಮಾಡಿರುವ 2025ರ ವಾರ್ಷಿಕ ಟ್ರಾಫಿಕ್ ಇಂಡೆಕ್ಸ್ ವರದಿಯ ಪ್ರಕಾರ, ವಿಶ್ವದ ಅತ್ಯಧಿಕ ವಾಹನ ದಟ್ಟಣೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ.

ವರದಿ ಪ್ರಕಾರ, ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗುತ್ತಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಈ ಬಾರಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವ ವಾಹನ ನೋಂದಣಿಯೇ ಈ ಸಮಸ್ಯೆಗೆ ಪ್ರಮುಖ ಕಾರಣವೆಂದು ವರದಿ ಉಲ್ಲೇಖಿಸಿದೆ. ಮೆಟ್ರೋ ಬಳಕೆ ಹೆಚ್ಚಾಗುತ್ತಿದ್ದರೂ ಕೂಡ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರದಿರುವುದು ಆತಂಕಕ್ಕೆ ಕಾರಣವಾಗಿದೆ.
ವರದಿಯಲ್ಲೇನಿದೆ..?
ಮೊದಲ ಸ್ಥಾನ – ಮೆಕ್ಸಿಕೋ ಸಿಟಿ (ಮೆಕ್ಸಿಕೋ)
ಎರಡನೇ ಸ್ಥಾನ – ಬೆಂಗಳೂರು (ಭಾರತ)
ಮೂರನೇ ಸ್ಥಾನ – ಡಬ್ಲಿನ್ (ಐರ್ಲೆಂಡ್)
ಭಾರತದ ಇರತ ನಗರಗಳ ಸ್ಥಾನ..!
ಪುಣೆ – 5ನೇ ಸ್ಥಾನ
ಮುಂಬೈ 18ನೇ ಸ್ಥಾನ
ನವದೆಹಲಿ 23ನೇ ಸ್ಥಾನ
ಕೋಲ್ಕತ್ತಾ 29ನೇ ಸ್ಥಾನ
ಜೈಪುರ 30ನೇ ಸ್ಥಾನ
ಚೆನ್ನೈ 32ನೇ ಸ್ಥಾನ
ವರದಿಯಲ್ಲೇನಿದೆ..?
ಬೆಂಗಳೂರಿನ ವಾಹನ ದಟ್ಟಣೆ ಮಟ್ಟ: 74.4%
2024ರಲ್ಲಿ ವಾಹನ ದಟ್ಟಣೆ: 72.7%
ಬೆಳಗಿನ ಅವಧಿಯಲ್ಲಿ 10 ಕಿಮೀ ಪ್ರಯಾಣಕ್ಕೆ ಬೇಕಾಗುವ ಸಮಯ: 41 ನಿಮಿಷ
ಸಂಜೆ ಅವಧಿಯಲ್ಲಿ 10 ಕಿಮೀ ಪ್ರಯಾಣಕ್ಕೆ ಬೇಕಾಗುವ ಸಮಯ: 45 ನಿಮಿಷ
15 ನಿಮಿಷಗಳಲ್ಲಿ ಸರಾಸರಿ ಕ್ರಮಿಸಬಹುದಾದ ದೂರ: 4.2 ಕಿಲೋಮೀಟರ್
10 ಕಿಲೋಮೀಟರ್ ದೂರಕ್ಕೆ ಸರಾಸರಿ ಸಮಯ: 36 ನಿಮಿಷ 9 ಸೆಕೆಂಡ್
ಕಳೆದ ವರ್ಷದ ಹೋಲಿಕೆಯಲ್ಲಿ ಸಮಯ ಹೆಚ್ಚಳ: 2 ನಿಮಿಷ 4 ಸೆಕೆಂಡ್
ಬೆಂಗಳೂರಿನ ವಾಹನ ಸವಾರರು ವರ್ಷಕ್ಕೆ ಟ್ರಾಫಿಕ್‌ನಲ್ಲಿ ಕಳೆಯುವ ಸಮಯ: 168 ಗಂಟೆಗಳು
ಪೀಕ್ ಅವರ್‌ನಲ್ಲಿ ಗರಿಷ್ಠ ಸರಾಸರಿ ವೇಗ: 13.9 ಕಿಮೀ/ಗಂ



















