ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾದ ಪರಿಣಾಮ ಸುಮಾರು 300ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಈ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಮನೆಗಳು, ಶಾಲೆಗಳು, ಮಕ್ಕಳನ್ನು, ಪ್ರಾಣಿಗಳು ಕಳೆದುಕೊಂಡು ಜನರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪ್ರಕೃತಿ ಮುನಿಸು ಎಷ್ಟು ಭೀಕರವಾಗಿರುತ್ತದೆ ಎಂಬುವುದಕ್ಕೆ ಸದ್ಯ ವಯನಾಡು ಉದಾಹರಣೆ ಎನ್ನುವಂತಾಗಿದೆ. ಈ ಪ್ರವಾಹ ಹೇಗೆ ಸಂಭವಿಸಿತ್ತು ಹಾಗೂ ಪ್ರವಾಹದ ಚಿತ್ರಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹದ ಮೂಲಕ ತೆಗೆದಿದೆ. ಸದ್ಯ ಈ ಫೋಟ ವೈರಲ್ ಆಗುತ್ತಿವೆ.
ಈಗಾಗಲೇ ಪ್ರವಾಹದಲ್ಲಿ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇಸ್ರೋ ತೆಗೆದ ಪೋಟೋದಲ್ಲಿ ಗುಡ್ಡದ ಭಾಗಗಳು ಹಾಗೂ ಭೂಮಿಯೂ 86,000 ಚದರ ಮೀಟರ್ ಜಾರಿದೆ. ಇರುವೈಪುಳ ನದಿಯ ಉದ್ದಕ್ಕೂ ಸುಮಾರು 8 ಕಿಲೋಮೀಟರ್ ವರೆಗೆ ಅನೇಕ ದೇಹಗಳು ಹಾಗೂ ಅವಶೇಷಗಳು ಹರಿದು ಹೋಗಿವೆ.
ಅಲ್ಲದೇ,ಭೂಕುಸಿತಗೊಂಡ ಸ್ಥಳದಲ್ಲಿ ಈ ಹಿಂದೆ ನಡೆದ ಭೂಕುಸಿತ ಪುರಾವೆಗಳು ಕೂಡ ಪತ್ತೆಯಾಗಿವೆ. ಹೈದರಬಾದಿನಲ್ಲಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹದ ಮೂಲಕ ಮೋಡದ ಮಧ್ಯೆ ಈ ಹೈ ರೆಸಲ್ಯೂಶನ್ ಫೋಟೋ ತೆಗೆಯಲಾಗಿದೆ. ಸಮುದ್ರ ಮಟ್ಟದಿಂದ 1550 ಮೀಟರ್ ಎತ್ತರದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಇಸ್ರೋ ಸಿದ್ಧಪಡಿಸಿದ 2023 ರ ‘ಲ್ಯಾಂಡ್‌ಸ್ಲೈಡ್ ಅಟ್ಲಾಸ್ ಆಫ್ ಇಂಡಿಯಾ’ ವಯನಾಡ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸುತ್ತದೆ ಎಂಬ ಬಗ್ಗೆ ವರದಿಯನ್ನು ಕೂಡ ನೀಡಿತ್ತು. ಆದರೂ ಅಲ್ಲಿನ ಅಧಿಕಾರಿಗಳು, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಈ ದುರಂತ ಅನುಭವಿಸುವಂತಾಗಿದೆ.
ಇಸ್ರೋ ಉಪಗ್ರಹ ನೀಡಿರುವ ಫೋಟೋ ಮತ್ತಷ್ಟು ವಿನಾಶದ ಬಗ್ಗೆ ಎಚ್ಚರಿಕೆ ನೀಡಿದೆ. ಸುಮಾರು 86,000 ಚದರ ಮೀಟರ್‌ನಷ್ಟು ಭೂಮಿ ಜಾರಿದೆ. ಇಸ್ರೋ ಈ ಭೂಕುಸಿತವನ್ನು ರಾಷ್ಟ್ರಪತಿ ಭವನದ ಎತ್ತರಕ್ಕೆ ಹೊಲಿಸಿದೆ. ಭವನಕ್ಕಿಂತ ಐದು ಪಟ್ಟು ಹೆಚ್ಚು ಭೂಕುಸಿತವಾಗಿದೆ ಎಂದು ಹೇಳಿದೆ. ಜುಲೈ 31, 2024ರಂದು ಇಸ್ರೋದ ಉಪಗ್ರಹ ಈ ಚಿತ್ರವನ್ನು ತೆಗೆದಿದೆ. ಇದರಲ್ಲಿ ಶಿಲಾಖಂಡರಾಶಿಗಳು (ಮರ, ನೀರು, ಮಣ್ಣು) ಇರುವನಿಪುಜಾ ನದಿಯ ಹರಿಯುವ ಹಾದಿಯಲ್ಲೇ ಸಾಗಿದೆ. ದಡದಲ್ಲಿರುವ, ಮನೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಈ ಶಿಲಾಖಂಡರಾಶಿಗಳು ಕೊಚ್ಚಿಕೊಂಡು ಹೋಗಿದೆ ಎಂದು ಹೇಳಿದೆ.
