ಗಾಜಾ: ಇಸ್ರೇಲ್ ಮತ್ತೆ ವಾಯು ದಾಳಿ (Israel Airstrikes) ಮುಂದುವರಿಸಿದ್ದು, ಗುರುವಾರ ಗಾಜಾದಲ್ಲಿ (Gaza Strip) ಕನಿಷ್ಠ 70 ಜನ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಜಾಪಟ್ಟಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯು ದಾಳಿ ನಡೆಸಿದೆ. ದಾಳಿಯಲ್ಲಿ ಹಲವು ಹಮಾಸ್ ನಾಯಕರೂ ಹತ್ಯೆಯಾಗಿದ್ದಾರೆ. ಜನವರಿ 19ರಂದು ಕದನ ವಿರಾಮ ಘೋಷಣೆಯಾದ ನಂತರ ಇಸ್ರೇಲ್ ನ ಎರಡನೇ ದಾಳಿ ಇದಾಗಿದೆ.
ಎರಡು ದಿನಗಳ ಹಿಂದೆ ಭೀಕರ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಗಾಜಾದಲ್ಲಿ 400ಕ್ಕೂ ಅಧಿಕ ಜನರನ್ನು ಬಲಿ ಪಡೆದಿತ್ತು. ಕದನ ವಿರಾಮ ಘೋಷಣೆಯ ನಂತರ ಒಪ್ಪಂದದಂತೆ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಇಸ್ರೇಲ್ ದಾಳಿ ಮಾಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.