ಜಾಮ್‌ನಗರ: ಅನಂತ್ ಅಂಬಾನಿ(Anant Ambani’s) ಸ್ಥಾಪಿಸಿದ ಅತ್ಯಾಧುನಿಕ ಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆ ʼವಂತಾರಾʼ, (Rehabilitation Institute ʼVantaraʼ,) ಕೋಲ್ಕತ್ತಾ ಬಳಿಯ ಮಾಯಾಪುರದಲ್ಲಿರುವ ಇಸ್ಕಾನ್‌ಗೆ ಸೇರಿದ 18 ವರ್ಷದ ವಿಷ್ಣುಪ್ರಿಯಾ(Vishnupriya) ಮತ್ತು 26 ವರ್ಷದ ಲಕ್ಷ್ಮಿಪ್ರಿಯಾ(Lakshmi Priya) ಎಂಬ ಎರಡು ಹೆಣ್ಣಾನೆಗಳನ್ನು ದತ್ತು ಪಡೆದುಕೊಂಡಿದೆ.
ಕಳೆದ ಏಪ್ರಿಲ್‌ನಲ್ಲಿ ವಿಷ್ಣುಪ್ರಿಯಾ ತನ್ನ ಮಾವುತನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ದುರಂತ ಘಟನೆಯ ನಂತರ ಆನೆಗಳ ವಿಶೇಷ ಆರೈಕೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚು ಸೂಕ್ತವಾದ ವಾತಾವರಣ ಕಲ್ಪಿಸಲು ಈ ಸ್ಥಳಾಂತರ ಮಾಡಲಾಗುತ್ತಿದೆ.
ತ್ರಿಪುರಾ ಹೈಕೋರ್ಟ್(Tripura High Court) ಮತ್ತು ಭಾರತದ ಸುಪ್ರೀಂ ಕೋರ್ಟ್‌ನ (Supreme Court of India) ಅನುಮತಿಯೊಂದಿಗೆ ವಂತಾರಾ ಮತ್ತು ಇಸ್ಕಾನ್ ನಡುವಿನ ಸಹಭಾಗಿತ್ವದ ಮೂಲಕ ಈ ವರ್ಗಾವಣೆ ಸಾಧ್ಯವಾಗುತ್ತಿದೆ. ಇದು ಸಂಕಷ್ಟದಲ್ಲಿರುವ ಕಾಡು ಪ್ರಾಣಿಗಳಿಗೆ ಸುರಕ್ಷಿತ, ಒತ್ತಡ ಮುಕ್ತ ಪರಿಸರ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊಂದಿದೆ.
ಇಸ್ಕಾನ್ ದೇವಾಲಯದ ಹಿರಿಯ ಸದಸ್ಯೆ ಮತ್ತು ಮಾಯಾಪುರದ ಮಾವುತರು ಮತ್ತು ಆನೆಗಳ ವ್ಯವಸ್ಥಾಪಕಿ ಹ್ರಿಮತಿ ದೇವಿ ದಾಸಿ ಮಾತನಾಡಿ, ‘ವಿಷ್ಣುಪ್ರಿಯಾ ಮತ್ತು ಲಕ್ಷ್ಮಿಪ್ರಿಯಾ ವಂತಾರಾದಲ್ಲಿ ಬೆಳೆಯಲಿದ್ದಾರೆ. ಶೀಘ್ರದಲ್ಲೇ ಹೊಸ ಸ್ನೇಹಿತರನ್ನು ಪಡೆಯುತ್ತಾರೆ ಮತ್ತು ಕಾಡಿನಲ್ಲಿ ಆನೆಗಳು ಅನುಭವಿಸುವ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಅನುಭವಿಸಿ ಸಂತೃಪ್ತ ಜೀವನವನ್ನು ನಡೆಸಲಿದ್ದಾರೆ ಎಂದು ನನಗೆ ವಿಶ್ವಾಸವಿದೆ’ ಎಂದರು.
ಇಸ್ಕಾನ್ ಮಾಯಾಪುರ 2007 ರಿಂದ ಲಕ್ಷ್ಮಿಪ್ರಿಯಾ ಮತ್ತು 2010 ರಿಂದ ವಿಷ್ಣುಪ್ರಿಯವನ್ನು ದೇವಾಲಯದ ಆಚರಣೆಗಳು ಮತ್ತು ವಿವಿಧ ಉತ್ಸವ ಸಂದರ್ಭಗಳಲ್ಲಿ ಬಳಸುತ್ತಿದೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ (People for the Ethical Treatment of Animals (PETA) India) ಮತ್ತು ವರ್ಲ್ಡ್ ಅನಿಮಲ್ ಪ್ರೊಟೆಕ್ಷನ್(World Animal Protection) ಸೇರಿದಂತೆ ಪ್ರಾಣಿ ಸಂರಕ್ಷಣಾ ಸಂಸ್ಥೆಗಳು ಇಸ್ಕಾನ್ ಆನೆಗಳನ್ನು ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆನೆ ಆರೈಕೆ ಸೌಲಭ್ಯಕ್ಕೆ ಬಿಡುಗಡೆ ಮಾಡಬೇಕೆಂದು ಪ್ರತಿಪಾದಿಸಿದ್ದವು.