ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಯಶ್ ತನ್ನ ಪತ್ನಿಯೊಂದಿಗೆ ವಿದೇಶದಲ್ಲಿದ್ದಾರೆ. ಇತ್ತ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಈ ಹಿನ್ನೆಲೆ ಯಶ್ ಅವರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ತಾಯಿ ಪುಷ್ಪ ಅವರು ಗರಂ ಆಗಿದ್ದಾರೆ.
ಯಶ್.. ಯಶ್.. ಅನ್ನೋದಾದ್ರೆ ಅವನ ಹತ್ತಿರವೇ ಹೋಗಿ ಎಂದಿದ್ದಾರೆ. ಹೋಗಿ ಯಶ್ ಹತ್ರಾನೇ ಪ್ರಶ್ನೆ ಕೇಳಿ, ನಾನು ಯಶ್ ಬಗ್ಗೆ ಏನೂ ಹೇಳಲ್ಲ. ಯಶ್ ನಿಮಗೆ ಮಾತ್ರವಲ್ಲ, ನಮಗೂ ಸಿಗಲ್ಲ ಎಂದಿದ್ದಾರೆ. ಅಮ್ಮನ ಮೊದಲ ಸಿನಿಮಾ ಬರುತ್ತಿದೆ ಅನ್ನೋ ಸೆಂಟಿಮೆಂಟ್ ಎಲ್ಲ ನಮ್ಮ ಮನೇಲಿ ಇಟ್ಟುಕೊಂಡಿಲ್ಲ. ನಾವು ಮನೆ ಕಟ್ಟಿದ ಮೇಲೆ ಯಶ್ ಇಲ್ಲ ಅಂದ್ರೂ ಗೃಹ ಪ್ರವೇಶ ಮಾಡುತ್ತೇವೆಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ನಮ್ಮ ಚೊಚ್ಚಲ ಕೊತ್ತಲವಾಡಿ ಸಿನಿಮಾವನ್ನು ಯಶ್, ರಾಧಿಕಾ ಯಾರಿಗೂ ತೋರಿಸುವುದಿಲ್ಲ. ಈ ಸಿನಿಮಾ ನೋಡ್ತಾರೋ ಬಿಡ್ತಾರೋ ಅನ್ನೋದನ್ನ ಅವರ ಬಳಿಯೇ ಕೇಳಿ. ಇಲ್ಲಿ ಮಗ ಬೇರೆ, ಅಮ್ಮ ಬೇರೆ. ಎಲ್ಲವೂ ಬೇರೆ ಬೇರೆ’ ಎಂದು ಪುಷ್ಪ ಹೇಳಿದ್ದಾರೆ. ಇವೆಲ್ಲ ನೋಡಿದ ಯಶ್ ಫ್ಯಾನ್ಸ್ ಗೆ ತಾಯಿ ಹಾಗೂ ಮಗನ ಮಧ್ಯೆ ಮನಸ್ತಾಪ ಮೂಡಿದ್ಯಾ ಅನ್ನೋ ಗೊಂದಲ ಶುರುವಾಗಿದೆ.