ಜಾಕಿ’ (Jackie) ನಟಿ ಭಾವನಾ ಮೆನನ್ (Bhavana Menon) ಬಹುಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳುತ್ತಿವೆ. ಭಾವನಾ ಬಗ್ಗೆ ಆಗಾಗ ಡಿವೋರ್ಸ್ (Divorce) ಕುರಿತು ವದಂತಿಗಳು ಚರ್ಚೆಯಾಗುತ್ತಿದ್ದು, ಈ ಕುರಿತು ಅವರೇ ಮೌನ ಮುರಿದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವಂತಹ ಜೋಡಿ ನಾವಲ್ಲ. ಚಿನ್ನ, ಮುದ್ದು ಅಂತ ಕ್ಯಾಪ್ಷನ್ ಕೊಡಲ್ಲ. ಹೀಗಾಗಿ ನಾನು ಪ್ರತಿ ದಿನವೂ ಫೋಟೋ ಅಪ್ಲೋಡ್ ಮಾಡಲ್ಲ. ಸುಮ್ಮನೆ ಏನೇನೋ ಕಮೆಂಟ್ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ನಾನು ಮತ್ತು ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ನಾವು ಚೆನ್ನಾಗಿದ್ದೇವೆ ಎಂದು ಪ್ರೂವ್ ಮಾಡಲು ಯಾವಾಗಲೂ ಫೋಟೋ ಹಾಕ್ತಾ ಕೂರುವುದಕ್ಕೆ ಆಗಲ್ಲ ಎಂದಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ರೋಮಿಯೋ’ (Romeo Film) ಸಿನಿಮಾದ ನಿರ್ಮಾಪಕ ನವೀನ್ (Naveen) ಜೊತೆ ಭಾವನ್ ಮೆನನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.