ಅಂತರಾಷ್ಟ್ರೀಯ ರಾಜಕೀಯದ ಎರಡು ಪ್ರಭಾವಿ ನಾಯಕರುಗಳ ಮಕ್ಕಳನ್ನು ಜೋಡಿಸಿ ನೆಟ್ಟಿಗರು ಹೊಸದೊಂದು ಡಿಜಿಟಲ್ “ಲವ್ ಸ್ಟೋರಿ” ಸೃಷ್ಟಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರ ಕಿರಿಯ ಪುತ್ರ ಬ್ಯಾರನ್ ಟ್ರಂಪ್ (19) ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರ ಪುತ್ರಿ ಕಿಮ್ ಜು ಏ ನಡುವೆ ಸಂಬಂಧವಿದೆ ಎಂಬಂತೆ ತೋರಿಸುವ ಮೀಮ್‌ಗಳು ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಮೀಮ್‌ಗಳಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಹಾಸ್ಯಾತ್ಮಕ ಪೋಸ್ಟ್‌ಗಳೂ ಕಾಣಿಸುತ್ತಿವೆ. ಕೆಲವರು ಇದನ್ನು ರಾಜಕೀಯ ವ್ಯಂಗ್ಯವಾಗಿ ಬಳಸಿಕೊಂಡು, ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ವೈಮನಸ್ಸನ್ನು ಈ “ಪ್ರೇಮಕಥೆ” ಒಂದೇ ಮಾಡಬಹುದು ಎಂಬ ರೀತಿಯ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಇಸ್ರೇಲ್ ಹಾಗೂ ಅಮೆರಿಕ ಇರಾನ್ ವಿರುದ್ಧ ದಾಳಿ ನಡೆಸಿದ ಹಿನ್ನೆಲೆ, ಉತ್ತರ ಕೊರಿಯಾ ಬೆಂಬಲ ಪಡೆಯಲು ಟ್ರಂಪ್ ಈ ರೀತಿಯ ಸಂಬಂಧ ಬೆಳೆಸಿಕೊಳ್ಳಬಹುದು ಎಂಬ ವ್ಯಂಗ್ಯಪೂರ್ಣ ಮಾತುಗಳನ್ನೂ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.
ಎಕ್ಸ್ (X), ಇನ್‌ಸ್ಟಾಗ್ರಾಮ್ ಮತ್ತು ರೆಡ್ಡಿಟ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಮೀಮ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದಿವೆ. ವಿಶೇಷವಾಗಿ ಇಬ್ಬರೂ ರಾಷ್ಟ್ರಗಳ ನಾಯಕರು ರಾಜತಾಂತ್ರಿಕವಾಗಿ ಸುದ್ದಿಯಲ್ಲಿ ಇರುವ ಸಮಯದಲ್ಲಿ ಈ ಮೀಮ್‌ಗಳು ಹೆಚ್ಚು ವೈರಲ್ ಆಗಿವೆ.
ಆದರೆ ಇದು ಕೇವಲ ಇಂಟರ್ನೆಟ್ ಬಳಕೆದಾರರ ಕಲ್ಪನೆ ಮತ್ತು ತಮಾಷೆಯಷ್ಟೇ. ಬ್ಯಾರನ್ ಟ್ರಂಪ್ ಅಮೆರಿಕದಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರೆ, ಕಿಮ್ ಜು ಏ ಉತ್ತರ ಕೊರಿಯಾದಲ್ಲಿ ತನ್ನ ತಂದೆಯ ಉತ್ತರಾಧಿಕಾರಿಯಾಗಿ ರೂಪುಗೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ. ಇವರಿಬ್ಬರ ನಡುವೆ ಯಾವುದೇ ರೀತಿಯ ವೈಯಕ್ತಿಕ ಪರಿಚಯ ಅಥವಾ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ : ನಿಮ್ಮ ಕೆಲಸ ನೀವು ನೋಡಿಕೊಳ್ಳಿ, ನಮ್ಮ ವಿಚಾರದಲ್ಲಿ ಮೂಗುತೂರಿಸಬೇಡಿ : ಟ್ರಂಪ್‌ಗೆ ಕಮಲ್ ಹಾಸನ್ ಖಡಕ್ ಎಚ್ಚರಿಕೆ



















