ನಟ ರಾಮ್ ಚರಣ್ ನಟಿಸಿದ್ದ ‘ಗೇಮ್ ಚೇಂಜರ್’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈ ಮಧ್ಯೆ ಅವರ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ವೊಂದು ಸಿಕ್ಕಿದ್ದು, ಈ ಬಾರಿ ಕ್ರೀಡಾಭಿಮಾನಿಗಳು ಕೂಡ ಖುಷಿ ಪಡುವಂತಿದೆ.
ರಾಮ್ ಚರಣ್ ಮುಂದಿನ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎಂ.ಎಸ್. ಧೋನಿ ನಟಿಸಲಿದ್ದಾರೆ ಎಂಬ ಮಾಹಿತಿ ವೈರಲ್ ಆಗಿದೆ. ಈ ಸಿನಿಮಾದಲ್ಲಿ ಚರಣ್ ಒಬ್ಬ ಕ್ರೀಡಾಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ರಾಮ್ ಚರಣ್ ಅವರ ಚಿತ್ರದಲ್ಲಿ ಖ್ಯಾತ ಕ್ರಿಕೆಟಿಗ ಧೋನಿ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದೆ.
‘ಧೋನಿ ಮತ್ತು ಚರಣ್ ಸ್ನೇಹಿತರು. ಆದರೆ, ಈ ಕುರಿತು ಸ್ಪಷ್ಟ ಮಾಹಿತಿ ಮಾತ್ರ ಸಿಕ್ಕಿಲ್ಲ. ಚಿತ್ರ ತಂಡ ಕೂಡ ಹಂಚಿಕೊಂಡಿಲ್ಲ.