ಬೆಂಗಳೂರು: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಛಲವಾದಿ, ನವೆಂಬರ್ ಕ್ರಾಂತಿ ಎನ್ನವುದು ಬಹುದಿನಗಳ ಸುದ್ದಿ. 6 ತಿಂಗಳ ಹಿಂದೆಯೇ ಕಾಂತ್ರಿ ಆಗುತ್ತದೆ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದರು. ಆ ಕ್ರಾಂತಿಗೆ ಇನ್ನೊಂದು ತಿಂಗಳು ಇದೆ. ಅದರ ಬೆಳವಣಿಗೆ ಈಗ ಶುರುವಾಗಿದೆ. ಸಿಎಂ ಬದಲಾವಣೆ ಆಗುತ್ತಾರೆ ಎನ್ನುವ ಸಮಯದಲ್ಲಿ ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ. ಸಿಎಂ ಅಲ್ಲದೇ ಬೇರೆ ಮಂತ್ರಿಗಳು ಸಭೆ ಮಾಡುತ್ತಿದ್ದಾರೆ. ಇದು ಕ್ರಾಂತಿಯ ವಿಚಾರವೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಡಿನ್ನರ್ ಮೀಟಿಂಗ್ ಎಂದರೆ ಅದೇ ವಿಶೇಷತೆ. ಎರಡು ವರ್ಷಗಳಿಂದ ಡಿನ್ನರ್ ಮೀಟಿಂಗ್ ಸಿಎಂ ಮಾಡಿರಲಿಲ್ಲ.ಈಗ ಮಾಡುತ್ತಿದ್ದಾರೆ ಎಂದರೆ ಸಿದ್ದರಾಮಯ್ಯ ಅವರ ಅಧಿಕಾರ ಅಂತ್ಯವಾ? ಅಥವಾ ಡಿಕೆಶಿ ಗುಂಪು ಹೇಳು ರೀತಿ ನವೆಂಬರ್ ಗೆ ಡಿಕೆಶಿವಕುಮಾರ್ ಸಿಎಂ ಆಗುತ್ತಾರೆ? ಅಥವಾ ದಲಿತ ಸಿಎಂ ಮಾಡುತ್ತೀನಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಈಗಲಾದರೂ ದಲಿತ ಸಿಎಂ ಮಾಡಿ ಅದಕ್ಕೆ ತೆರೆ ಎಳೆಯುತ್ತಾರಾ ಎಂದು ಕೇಳಿದ್ದಾರೆ.
ನಿನ್ನೆಯಿಂದ ಸಿಎಂ ಆಗಿ ಪರಮೇಶ್ವರ್ ಅವರನ್ನು ಮಾಡುತ್ತಾರೆ. ಅವರನ್ನು ಬೆಂಬಲಿಸುತ್ತೇವೆ ಎಂದು ಸಿಎಂ ಜೊತೆ ಇರುವ ಮಂತ್ರಿಗಳು ಹೇಳುತ್ತಿದ್ದಾರೆ. ಸಿಎಂ ಅವರು ಪರಮೇಶ್ವರ್ ಸಿಎಂ ಮಾಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರಾ? ನವೆಂಬರ್ ಕ್ರಾಂತಿಗೂ ಸಿಎಂ ಡಿನ್ನರ್ ಮೀಟಿಂಗ್‌ಗೂ ನಿಕಟ ಸಂಬಂಧವಿದೆ. ಈ ಬೆಳವಣಿಗೆ ನೋಡುತ್ತಿದ್ದರೆ ಏನೋ ದೊಡ್ಡ ವಿಷಯ ಇದೆ ಎಂದು ತಮ್ಮ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.