ಕಂಗನಾ ರಣಾವತ್(Kangana Ranaut) ನಿರ್ದೇಶಿಸಿ, ನಟಿಸಿರುವ, ‘ಎಮರ್ಜೆನ್ಸಿ’(Emergency) ಚಿತ್ರದ ಟ್ರೇಲರ್ ಈಗಷ್ಟೇ ಬಿಡುಗಡೆಯಾಗಿದೆ. ಹಲವರು ಟ್ರೇಲರ್ ಇಷ್ಟ ಪಟ್ಟಿದ್ದಾರೆ. ಇನ್ನೂ ಹಲವರು ವಿರೋಧಿಸುತ್ತಿದ್ದಾರೆ. ಈ ಮಧ್ಯೆ ನಟಿ ಹಾಗೂ ಸಂಸದೆ ಕಂಗನಾ ಮತ್ತೊಂದು ಅಪ್ಡೇಟ್ ನೀಡಿದ್ದಾರೆ.
ಈ ಚಿತ್ರ ಸಂಪೂರ್ಣವಾಗಿ ರಾಜಕೀಯದ ಕಥೆ ಹೊಂದಿದೆ. ಚಿತ್ರ ಬಿಡುಗಡೆ ಮಾಡಲು ಕಂಗನಾ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ರಾಜಕೀಯದ(politics) ಬಗ್ಗೆ ಕಥೆ ಮಾಡದಿರಲು ನಿರ್ಧರಿಸಿದ್ದಾರೆ.
ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿರು ತಕರಾರರು ತೆಗೆದಿದ್ದರು. ಸೆನ್ಸಾರ್ ಪ್ರಮಾಣಪತ್ರ ನೀಡಲು ಸಾಕಷ್ಟು ಆಟ ಆಡಿಸಿದರು. ಪಂಜಾಬಿನ ಶಿರೋಮಣಿ ಅಕಾಲಿ (Shiromani Akali) ದಳದಿಂದ ಕೂಡ ಚಿತ್ರದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ ಈಗ ಕಂಗನಾ ರಣಾವತ್ ತಮ್ಮ ಮುಂದಿನ ಜರ್ನಿ ಬಗ್ಗೆ ಮಾತನಾಡಿದ್ದಾರೆ.
‘ನಾನು ಮತ್ತೊಮ್ಮೆ ರಾಜಕೀಯ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದಿಲ್ಲ. ಒಂದು ಸಿನಿಮಾ ಮಾಡಲು ಸಾಕಷ್ಟು ಕಷ್ಟವಾಯಿತು. ಇದರಿಂದ ನನಗೆ ಯಾವುದೇ ಮೋಟಿವೇಷನ್ ಸಿಕ್ಕಿಲ್ಲ. ನಡೆದ ಕಥೆಯನ್ನು ಅದರಲ್ಲೂ ವ್ಯಕ್ತಗಳ ಬಗ್ಗೆ ಜನರು ಏಕೆ ಹೆಚ್ಚು ಸಿನಿಮಾ (cinema)_ಮಾಡಲ್ಲ ಎನ್ನುವುದು ಈಗ ಗೊತ್ತಾಯಿತು. ಅನುಮಪ್ ಖೇರ್ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾ ಮಾಡಿದರು. ಆದರೆ, ನಾನು ಈ ರೀತಿಯ ಸಿನಿಮಾಗಳನ್ನು ಮತ್ತೆ ಮಾಡುವುದಿಲ್ಲ ಎಂದಿದ್ದಾರೆ.
ಕಂಗನಾ ರಣಾವತ್ ಅವರು ಈಗ ಸಂಸದೆ ಆಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ನಿಂತು ಗೆಲುವು ಕಂಡಿದ್ದಾರೆ.