ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಶೈಕ್ಷಣಿಕ ವರ್ಷ ಶುರುವಾದರೂ ಮಕ್ಕಳಿಗೆ ಇದುವರೆಗೂ ಸಮವಸ್ತ್ರ ಹಾಗೂ ಶೂಗಳು ಸಿಕ್ಕಿಲ್ಲ. ಹೀಗಾಗಿ ಬಿಟ್ಟಿ ಭಾಗ್ಯಗಳಿಗೆ ಕೊಟ್ಟ ಅದ್ಯತೆ ಶಾಲಾ ಮಕ್ಕಳ ಮೇಲೆ ಯಾಕ್ಕಿಲ್ಲ? ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿಗೆ ಸಾವಿರಾರೂ ಕೋಟಿ ರೂ. ಖರ್ಚು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಶಾಲಾ, ಕಾಲೇಜು ಮಕ್ಕಳಿಗೆ ಸಮವಸ್ತ್ರ. ಶೂ ಕೊಡದಿರುವಷ್ಟು ಕಷ್ಟ ಬಂದಿದೆಯಾ? ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
1 ರಿಂದ 12ನೇ ತರಗತಿವರೆಗಿನ ಬಿಬಿಎಂಪಿ ಶಾಲಾ ಮಕ್ಕಳಿಗೆ ಇದುವವರೆಗೂ ಶೂ ಕೊಟ್ಟಿಲ್ಲ. ಸರ್ಕಾರ ನೀಡದಿದ್ದರೂ ಬಿಬಿಎಂಪಿ ಆದರೂ ವಿಶೇಷ ಅನುದಾನ ಮಂಜೂರು ಮಾಡಿ ವಿತರಿಸಬೇಕಿತ್ತು ಎಂದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ಒಟ್ಟು 22 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ತಿಂಗಳು ಸಮವಸ್ತ್ರ ಹಾಗೂ ಶೂಗೆ ಟೆಂಡರ್ ಕರೆದಿದ್ದರೂ ಇದುವರೆಗೂ ವಿತರಿಸಿಲ್ಲ.



















