ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾದದಿಂದ ಪರಿಶಿಷ್ಟ ಜಾತಿ ಸಮೀಕ್ಷೆ ಕೋಲಾಹಲ ಸೃಷ್ಟಿಸಿದೆ. ಈ ಮಧ್ಯೆ ಸಮೀಕ್ಷೆ ನಡೆಸುವುದಕ್ಕಾಗಿ ಬಿಬಿಎಂಪಿ ಖರ್ಚು ಮಾಡಿದ ಅನುದಾನ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆಂದು ಬಿಬಿಎಂಪಿ ಕೋಟಿ..ಕೋಟಿ ಅನುದಾನ ಖರ್ಚು ಮಾಡಿದೆ. ಸ್ಟಿಕ್ಕರ್ ಹೆಸರಿನಲ್ಲಿ ಕೋಟ್ಯಾಂತರ ಹಣ ಪೋಲು ಮಾಡಲಾಗಿದೆ. ಕರ್ನಾಟಕ ನ್ಯೂಸ್ ಬೀಟ್ ಗೆ ಪಾಲಿಕೆ ಖರ್ಚು ಮಾಡಿರುವ ಅನುದಾನ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸುವುದಕ್ಕಾಗಿ ಪಾಲಿಕೆ ಖರ್ಚು ಮಾಡಿರುವುದು ಬರೋಬ್ಬರಿ 3.60 ಕೋಟಿ ರೂ. ಆಶಾ ಕಾರ್ಯಕರ್ತೆಯರು, ಜೂನಿಯರ್ ಹೆಲ್ತ್ ಇನ್ ಸ್ಪೆಕ್ಟರ್, ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗಿದೆ. ಸಿಬ್ಬಂದಿ ಬಳಕೆ ಮಾಡಿಕೊಂಡರೂ ಇಷ್ಟೊಂದು ಹಣ ಹರಿದು ಹೋಗಿದ್ದು ಹೇಗೆ? ಎಂಬ ಮಾತು ಕೇಳಿ ಬರುತ್ತಿದೆ.
ಸಮೀಕ್ಷೆಯ ಇಂಚಿಂಚು ಮಾಹಿತಿ
- ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 35 ಲಕ್ಷ ಮನೆ
- 35 ಲಕ್ಷ ಮನೆಗಳಿಗೆ ಒಂದು ಸ್ಟಿಕ್ಕರ್
- ಒಂದು ಸ್ಟಿಕ್ಕರ್ ಗೆ 2 ರೂ.
- 350000 × 2= 70 ಲಕ್ಷ ರೂ.
- ಇದಕ್ಕೆ ಸೇವಾಶುಲ್ಕ ಸೇರಿಸಿದರೆ 3.50 ಲಕ್ಷ ರೂ.
- 13.33 ಲಕ್ಷ ರೂ. ಜಿಎಸ್ ಟಿ
- ಎಲ್ಲ ಶುಲ್ಕ ಸೇರಿಸಿದರೆ ಒಂದು ಸ್ಟಿಕ್ಕರ್ ಗೆ 2.47 ರೂ. ಆಗುತ್ತದೆ
- ಅಂದರೆ ಸ್ಟಿಕರ್ ಗೆ ಒಟ್ಟು 86.73 ಲಕ್ಷ ರೂ. ಆಗಲಿದೆ
- ಪ್ರತಿ ಸ್ಟಿಕ್ಕರ್ ಅಂಟಿಸುವುದಕ್ಕೆ 5 ರೂ.
- ಪ್ರತಿ ಮನೆಗೆ 5 ರೂ. ನೀಡಿದರೆ ಒಟ್ಟು 1.75 ಲಕ್ಷ ರೂ. ಆಗಲಿದೆ.
- ಅಂದರೆ, ಒಂದು ಸ್ಟಿಕರ್ ಅಂಟಿಸಲು ಒಟ್ಟು 7. 47 ರೂ. ಆಗಲಿದೆ.
- ಸಮೀಕ್ಷೆ ಹೆಸರಿನಲ್ಲಿ ಬೀದಿ ನಾಟಕ, ಜಾಗೃತಿ ಅಂತ 49.59 ಕೋಟಿ ರೂ. ಖರ್ಚು
- 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಟೋ ಮೂಲಕ ಪ್ರಚಾರಕ್ಕೆ 11.07 ಲಕ್ಷ
- 5 ಲಕ್ಷ ಬಿತ್ರಿ ಪತ್ರಕ್ಕೆ 5 ಲಕ್ಷ ರೂ. ಖರ್ಚು
- ಸಾಮಾಜಿಕ ಜಾಲತಾಣ, ಯೂಟ್ಯೂಬ್ ನಲ್ಲಿ ಪ್ರಚಾರಕ್ಕೆ 28 ಲಕ್ಷ ರೂ. ಖರ್ಚು
- ಎರಡು ಶಾರ್ಟ ಫಿಲ್ಮ್ ತಯಾರಿಗೆ 49 .56 ಲಕ್ಷ ರೂ.
ಹೀಗೆ ಒಳಮೀಸಲಾತಿ ಸಮೀಕ್ಷೆಗೆಂದೇ ಪಾಲಿಕೆಯು ಬರೋಬ್ಬರಿ 3 ಕೋಟಿ ರೂ. ಖರ್ಚು ತೋರಿಸಿದೆ. ತೆರಿಗೆದಾರರ ದುಡ್ಡು ಈ ರೀತಿ ಪೋಲಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.