ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಪ್ರೇಮಿಗಳ ದಿನದಂದು ʼI Love Youʼ ಅಂತ ಪ್ರಪೋಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಮೂಲಕ ಬುಲ್ ಬುಲ್ ಬೆಡಗಿ ಎಂಗೇಜ್ ಆಗಿಬಿಟ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಮಾತ್ರವಲ್ಲದೇ ಈಗ ಬೇರೆ ಭಾಷೆಗಳಲ್ಲಿಯೂ ಪವರ್‌ಫುಲ್ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಆದ್ರೆ ಲ್ಯಾಂಡ್‌ಲಾರ್ಡ್, ಕಲ್ಟ್ ಸಿನಿಮಾ ಬಳಿಕ ಕೊಂಚ ರಿಲೀಫ್ ಪಡೆದಿರುವ ರಚ್ಚು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಆಗ್ಗಾಗೆ ಪೋಟೋ, ವಿಡಿಯೋಗಳನ್ನ ಶೇರ್ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ.
ʻಪ್ರೇಮಿಗಳ ದಿನʼವಾದ ಇಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ʻಏನ್ ಗೊತ್ತಾ ಐ ಲವ್ ಯೂ ಅಷ್ಟೇʼ ಎಂದು ಹೇಳುವ ವಿಡಿಯೋವೊಂದನ್ನ ರಚಿತ ರಾಮ್ ಅವರು ಪೋಸ್ಟ್ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಏಕೆಂದ್ರೆ ಇತ್ತೀಚಿನ ದಿನಗಳಲ್ಲಿ ರಚಿತಾ ರಾಮ್ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ರಚ್ಚು ಕೂಡ ಮನೆಯಲ್ಲಿ ಹುಡುಗನನ್ನ ನೋಡ್ತಿದ್ದಾರೆ. ಆದಷ್ಟು ಬೇಗ ಗುಡ್‌ನ್ಯೂಸ್ ಕೊಡ್ತೀನಿ ಅಂತ ಹೇಳುತ್ತಲೇ ಇದ್ದರು. ಇದೀಗ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹೆಚ್ಚಿಸಿದೆ.
ರಚಿತಾ ರಾಮ್ ಲವ್‌ನಲ್ಲಿ ಬಿದ್ದಿದ್ದಾರಾ? ಮದ್ವೆ ಫಿಕ್ಸ್ ಆಯ್ತಾ? ಹಾಗಾದ್ರೆ ಯಾರಿಗೆ I Love You ಹೇಳಿದ್ದು? ಅಂತೆಲ್ಲ ಫ್ಯಾನ್ಸ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಇದನ್ನೂ ಓದಿ : ಪನ್ನುನ್ ಹತ್ಯೆ ಸಂಚು ಪ್ರಕರಣ | ಅಮೆರಿಕ ನ್ಯಾಯಾಲಯದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ತಪ್ಪೊಪ್ಪಿಗೆ



















