ನಟಿ ಉರ್ಫಿ ಜಾವೇದ್ ಆಗಾದ ಸುದ್ದಿಯಾಗುತ್ತಲೇ ಇರುತ್ತಾರೆ. ವಿಚಿತ್ರವಾದ ಕಾಸ್ಟ್ಯೂಮ್ ಧರಿಸುವುದೇ ಅವರ ಐಡೆಂಟಿಟಿ ಆಗಿ, ಹಲವು ಬಾರಿ ಬಟ್ಟೆಯಿಂದಲೇ ಸುದ್ದಿಯಾಗುತ್ತಿದ್ದರು. ಈಗ ಮದ್ಯ ಸೇವಿಸಿ ಸುದ್ದಿಯಾಗಿದ್ದಾರೆ.
ವೀಕೆಂಡ್ನಲ್ಲಿ ಉರ್ಫಿ ಜಾವೇದ್ ಅವರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿ ಮುಗಿಸಿಕೊಂಡು ಹೊರಬಂದ ಅವರನ್ನು ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ನಡೆಯಲೂ ಕೂಡ ಉರ್ಫಿ ಜಾವೇದ್ ಕಷ್ಟಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಪಾರ್ಟಿ ಮಾಡಿ ಹೊರಗೆ ಬಂದ ಉರ್ಫಿ ಜಾವೇದ್ ಅವರನ್ನು ಗೆಳತಿಯರು ಕೈ ಹಿಡಿದು ನಡೆಸಿಕೊಂಡು ಬಂದಿದ್ದಾರೆ. ಸ್ನೇಹಿತೆಯರ ಸಪೋರ್ಟ್ ಪಡೆದುಕೊಂಡು ಉರ್ಫಿ ಜಾವೇದ್ ಹೆಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ನಿಧನವಾಗಿ ಥ್ಯಾಂಕ್ಯೂ ಥ್ಯಾಂಕ್ಯೂ ಎನ್ನುತ್ತ ಸಾಗಿದ್ದಾರೆ. ಕುಡಿದು ನಶೆ ಏರಿಸಿಕೊಂಡ ಉರ್ಫಿ ಜಾವೇದ್ ಅವರನ್ನು ಸ್ನೇಹಿತೆಯರು ಸೇಫ್ ಆಗಿ ಕರೆದುಕೊಂಡು ಬಂದು ಕಾರಿನೊಳಗೆ ಕೂರಿಸಿ ಕಳಿಸಿದ್ದಾರೆ.

ಸದ್ಯ ವಿಡಿಯೋ ವೈರಲ್ ಆಗಿದ್ದು, ಹಲವರು ಹಲವಾರು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಲವರು ಅವರು ನಿಜವಾಗಿಯೂ ಕುಡಿದಿದ್ದಾರೆ ಎಂದರೆ, ಹಲವರು ಪಾರ್ಟಿ ಮಾಡಿ ಹೊರಬರುವಾಗ ಉರ್ಫಿ ಜಾವೇದ್ ಅವರು ಮೊದಲ ನಾಲ್ಕು ಹೆಚ್ಚೆ ಸರಿಯಾಗಿಯೇ ನಡೆಯುತ್ತಾರೆ. ಆಮೇಲೆ ಪಾಪರಾಜಿಗಳ ಕ್ಯಾಮೆರಾ ಇರುವುದು ಖಚಿತ ಆದ ಬಳಿಕ ಅವರು ತೂರಾಡಿಕೊಂಡು ನಡೆದು ಬರುತ್ತಾರೆ. ಪ್ರಚಾರ ಪಡೆಯಲು ಬೇಕಂತಲೇ ಮಾಡಿರುವ ನಾಟಕ ಇದು ಎಂದು ಅನೇಕರು ಅಭಿಪ್ರಾಯ ತಿಳಿಸಿದ್ದಾರೆ. ಸತ್ಯ ಯಾವುದು? ಉರ್ಫಿಗೆ ಮಾತ್ರ ಗೊತ್ತು.