ಚಂದನವನದಲ್ಲಿ ಒಂದಲ್ಲಾ ಒಂದು ಗಾಸಿಪ್‌ಗಳು ಸಾಮಾನ್ಯವಾಗಿ ಹರಿದಾಡುತ್ತಾ ಇರುತ್ತವೆ. ಹಲವಾರು ನಟ ನಟಿಯರ ಬಗ್ಗೆ ಡೇಟಿಂಗ್ ಸ್ಟೋರಿಗಳು ಕೇಳಿ ಬರುತ್ತವೆ. ಈಗ ಇದೇ ಸಾಲಿನಲ್ಲಿ ನಟ ನವೀನ್ ಶಂಕರ್ ಹಾಗೂ ನಟಿ ಭಾವನ ರಾವ್ ಹೆಸರು ಕೇಳಿ ಬರುತ್ತಿದೆ.

ಕನ್ನಡದಲ್ಲಿ ಗಾಳಿಪಟ ಸಿನಿಮಾ ಮೂಲಕ ನಟಿ ಭಾವನಾ ರಾವ್ ಖ್ಯಾತಿ ಗಳಿಸಿದ ನಂತರ ಅಟ್ಟಹಾಸ, ಬಹುಪರಾಕ್, ದಯವಿಟ್ಟು ಗಮನಿಸಿ, ಹೊಂದಿಸಿ ಬರೆಯಿರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಮಿಂಚಿ ಜನರ ಮನಸ್ಸು ಗೆದ್ದಿದ್ದಾರೆ. ಮೂಲತಃ ಶಿವಮೊಗ್ಗದವರಾದ ಭಾವನಾ, ಡಾನ್ಸರ್ ಹಾಗೂ ನಟಿಯಾಗಿ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ನಟಿ ಭಾವನಾ ರಾವ್ ಫಿಟ್ನೆಸ್ ಗೆ ಫ್ಯಾನ್ಸ್ ಮನಸೋತಿದ್ದಾರೆ.

ನಟ ನವೀನ್ ಶಂಕರ್ ನಟಿಸಿರುವ ‘ಗುಳ್ಟು’ ಸಿನಿಮಾ 2018ರಲ್ಲಿ ತೆರೆಕಂಡ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟೂ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಐಶಾನಿ ಶೆಟ್ಟಿ ಜೊತೆಗೆ ಮಿಂಚಿದ್ದರು. ಇದಾದ ನಂತರ ಬಹುತಾರಾಗಣವಿರುವ ಹೊಂದಿಸಿ ಬರೆಯಿರಿ ಚಿತ್ರದಲ್ಲೂ ನಟಿಸಿದ್ದರು. ಸದ್ಯ ಡಾಲಿ ಧನಂಜಯ್ ಅಭಿನಯದ 125ನೇ ಸಿನಿಮಾ ‘ಗುರುದೇವ್ ಹೊಯ್ಸಳ’ ಸಿನಿಮಾದಲ್ಲಿ ಖಳನಟನಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಇವರಿಬ್ಬರ ಬಗ್ಗೆ ಗಾಸಿಪ್ ಹಬ್ಬಿದ್ದು, ಹಲವು ಫೋಟೋಗಳು ಕೂಡ ಇದಕ್ಕೆ ಪುಷ್ಠಿ ನೀಡುತ್ತಿವೆ.