ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ರಾಜ್ಯದಲ್ಲಿ ಕೋಳಿ ಮೊಟ್ಟೆಗಳ ದರದಲ್ಲಿ ಏಕಾಏಕಿ ಭಾರೀ ಕುಸಿತ ಕಂಡುಬಂದಿದ್ದು, ವ್ಯಾಪಾರಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಒಂದಲ್ಲ ಎರಡಲ್ಲ, ಬರೋಬ್ಬರಿ ₹4ರವರೆಗೆ ದರ ಇಳಿಕೆಯಾಗಿದ್ದು, ₹8ಕ್ಕೆ ಮಾರಾಟವಾಗುತ್ತಿದ್ದ ಮೊಟ್ಟೆ ಇದೀಗ ₹4ಕ್ಕೆ ಇಳಿದಿದೆ. ಹೋಲ್‌ಸೇಲ್ ಅಂಗಡಿಗಳಲ್ಲಿ ಮೊಟ್ಟೆಗಳು ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವುದು ಗಮನಾರ್ಹವಾಗಿದೆ.
ವಿದೇಶಗಳಿಗೆ ರಫ್ತಾಗುತ್ತಿದ್ದ ಮೊಟ್ಟೆಗಳ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿರುವುದು ಈ ದರ ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಅಂತರರಾಷ್ಟ್ರೀಯ ಪರಿಸ್ಥಿತಿಯ ಪರಿಣಾಮವಾಗಿ ಬೇಡಿಕೆ ಕುಂಠಿತಗೊಂಡಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುವರಿ ಸರಬರಾಜು ಉಂಟಾಗಿದೆ.
ಈ ಏಕಾಏಕಿ ದರ ಕುಸಿತದಿಂದ ಮೊಟ್ಟೆ ಉತ್ಪಾದಕರು ಹಾಗೂ ವ್ಯಾಪಾರಸ್ಥರು ನಷ್ಟದ ಭೀತಿಯಲ್ಲಿ ಇದ್ದು, ಉದ್ಯಮದಲ್ಲಿ ಅನಿಶ್ಚಿತತೆ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಕೋಳಿ ಸಾಕಾಣಿಕೆ ಕ್ಷೇತ್ರಕ್ಕೂ ದೊಡ್ಡ ಮಟ್ಟದ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಅಮೆರಿಕ ನಮ್ಮ ಮೇಲೆ ದಾಳಿ ನಡೆಸಿದರೆ, ನಾವು ಮುಂಬೈ, ದಿಲ್ಲಿ ಮೇಲೆ ಬಾಂಬ್ ಹಾಕುತ್ತೇವೆ : ಪಾಕ್!



















