ಬೆಂಗಳೂರು : ವಿವೋ ಉಪ-ಬ್ರ್ಯಾಂಡ್ iQOO ತನ್ನ ಹೊಸ ‘Z’ ಸರಣಿಯ ಸ್ಮಾರ್ಟ್‌ಫೋನ್ iQOO Z11 ಅನ್ನು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಫೋನ್‌ನ ಪ್ರಮುಖ ಆಕರ್ಷಣೆ ಎಂದರೆ ಇದರಲ್ಲಿರುವ ಬೃಹತ್ 9,020mAh ಸಾಮರ್ಥ್ಯದ ಬ್ಯಾಟರಿ. ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಅತ್ಯಾಧುನಿಕ ಗೇಮಿಂಗ್ ಫೀಚರ್‌ಗಳನ್ನು ಒಳಗೊಂಡಿದೆ. ಸದ್ಯ ಚೀನಾದಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೂ ಪ್ರವೇಶಿಸುವ ನಿರೀಕ್ಷೆಯಿದೆ.
ಡಿಸ್‌ಪ್ಲೇ ಮತ್ತು ಪರ್ಫಾರ್ಮೆನ್ಸ್
iQOO Z11 ಸ್ಮಾರ್ಟ್‌ಫೋನ್ 6.83-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 1.5K (2800×1260 ಪಿಕ್ಸೆಲ್) ರೆಸಲ್ಯೂಶನ್ ನೀಡುತ್ತದೆ. ಗೇಮರ್‌ಗಳಿಗೆ ಅನುಕೂಲವಾಗುವಂತೆ ಈ ಡಿಸ್‌ಪ್ಲೇ 165Hz ನ ಅತಿ ಹೆಚ್ಚಿನ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ವೇಗದ ಕಾರ್ಯಕ್ಷಮತೆಗಾಗಿ ಇದರಲ್ಲಿ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 8500 (MediaTek Dimensity 8500) ಚಿಪ್‌ಸೆಟ್ ಬಳಸಲಾಗಿದ್ದು, ಇದು ಆಂಡ್ರಾಯ್ಡ್ 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 8GB ಯಿಂದ 16GB ವರೆಗಿನ RAM ಆಯ್ಕೆಗಳನ್ನು ಹೊಂದಿದೆ.
ಕ್ಯಾಮೆರಾ ಮತ್ತು ಬ್ಯಾಟರಿ ವೈಶಿಷ್ಟ್ಯಗಳು
ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿದ್ದು, 50 ಮೆಗಾಪಿಕ್ಸೆಲ್‌ನ ಮುಖ್ಯ ಸೆನ್ಸರ್ (OIS ಬೆಂಬಲದೊಂದಿಗೆ) ಮತ್ತು 2 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್ ನೀಡಲಾಗಿದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ, 9,020mAh ನ ಬೃಹತ್ ಬ್ಯಾಟರಿಗೆ ಪೂರಕವಾಗಿ 90W ವೇಗದ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಅತಿ ಕಡಿಮೆ ಸಮಯದಲ್ಲಿ ಫೋನ್ ಫುಲ್ ಚಾರ್ಜ್ ಆಗಲಿದೆ. ಅಲ್ಲದೆ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ.
ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿ iQOO Z11 ನ ಆರಂಭಿಕ ಬೆಲೆ 2,299 ಯುವಾನ್‌ಗಳು (ಭಾರತೀಯ ರೂಪಾಯಿಗಳಲ್ಲಿ ಸುಮಾರು 31,200 ರೂ.). ವಿವಿಧ ಸ್ಟೋರೇಜ್ ವೇರಿಯೆಂಟ್‌ಗಳ ಬೆಲೆ ಹೀಗಿದೆ:
- 8GB + 256GB: ಅಂದಾಜು 31,200 ರೂ.
- 12GB + 256GB: ಅಂದಾಜು 34,000 ರೂ.
- 16GB + 512GB: ಅಂದಾಜು 46,300 ರೂ.
ಈ ಸ್ಮಾರ್ಟ್‌ಫೋನ್ ಸ್ಕೈಲೈಟ್ ವೈಟ್, ಪೋಲಾರ್ ನೈಟ್ ಬ್ಲಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನು ಅಧಿಕೃತವಾಗಿ ಘೋಷಿಸಿಲ್ಲ.
ಇದನ್ನೂ ಓದಿ : ಮೈಸೂರಿನಲ್ಲಿ ವಿಶೇಷವಾಗಿ ರಾಮನವಮಿ ಅಚರಿಸಿದ ಮುಸ್ಲಿಂ ಬಾಂಧವರು!



















