ಮೇಕೆದಾಟು ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಒಂದು ಉನ್ನತ ಸ್ಥಾನದಲ್ಲಿ ಕುಳಿತಿದ್ದಾರೆ. ಪ್ರಾಯಶಃ ಅವರು ಮನಸ್ಸು ಪಟ್ಟರೇ ನಾವೆಲ್ಲ ಏನು ಹೋರಾಟ ಮಾಡಿದ್ದೇವೆ. ಅದಕ್ಕೆ ಫಲ ಕೊಡಿಸಬಹುದು. ರಾಮನಗರ ಜಿಲ್ಲೆಯ ಋಣ ಕುಮಾರಸ್ವಾಮಿ ಮೇಲೆ ಇದೆ. ಇಡೀ ರಾಜ್ಯಕ್ಕಿಂತ ಕುಮಾರಸ್ವಾಮಿ ಮಾತು ಪ್ರಧಾನಿ ಬಳಿ ನಡೆಯುತ್ತದೆ.
ತಮಿಳುನಾಡು ಬಳಿ ಒಪ್ಪಿಸಿ ಎಂದು ಯಾರು ಬೇಕಾದರೂ ಹೇಳುತ್ತಾರೆ. ಮೆಂಟಲ್ ಆಸ್ಪತ್ರೆಗೆ ಹೋಗಿ ಕೇಳಿದರೂ ಅಲ್ಲಿಯವರು ಹೇಳಿ ಬಿಡುತ್ತಾರೆ. ಮಾಜಿ ಸಿಎಂ, ಪ್ರಧಾನಿ ಮಗ, ಕೇಂದ್ರದ ಸಚಿವರು ನಿಮ್ಮ ಬಾಯಲ್ಲಿ ಇಂತಹ ಮಾತು ಬರಬಾರದು. ನೀವು ಮನಸ್ಸು ಮಾಡಬೇಕು, ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡಬೇಕು.ನೀವು ರಾಜ್ಯದ ಮೇಲೆ ಹೇಳಬೇಡಿ. ರಾಜ್ಯ ಸರ್ಕಾರ ಹೇಳಿ ಮಾಡದ ಮೇಲೆ ನಿಮ್ಮದು ಏನು ಉಳಿದುಕೊಳ್ಳುತ್ತದೆ ಎಂದು ತಿರುಗೇಟು ನೀಡಿದ್ದಾರೆ.



















