ಐಪಿಎಲ್ ಮೆಗಾ ಹರಾಜು ನ. 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 1574 ಕ್ರಿಕೆಟಿಗರು ಇದ್ದಾರೆ. ಹೀಗಾಗಿ ಯಾರು ಹೆಚ್ಚು ಹಣಕ್ಕೆ ಹರಾಜಾಗಬಹುದು ಎಂಬ ಚರ್ಚೆ ಶುರುವಾಗಿದೆ. ಐವರು ಸ್ಟಾರ್ ವಿಕೆಟ್ ಕೀಪರ್ ಗಳಿಗೆ ಭಾರಿ ಮೊತ್ತ ಸಿಗಬಹುದು ಎಂಬ ಚರ್ಚೆ ಶುರುವಾಗಿದೆ.
ಲಕ್ನೋ ಸೂಪರ್ಜೈಂಟ್ಸ್ ತಂಡದಿಂದ ಹೊರಬಿದ್ದಿರುವ ಕೆಎಲ್ ರಾಹುಲ್, ರಿಷಬ್ ಪಂತ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹಲವು ಫ್ರಾಂಚೈಸಿಗಳು ರಾಹುಲ್ ಮೇಲೆ ಕಣ್ಣಿಟ್ಟಿವೆ. ಕೀಪಿಂಗ್, ಬ್ಯಾಟಿಂಗ್, ನಾಯಕತ್ವದ ಅನುಭವ ಇರುವ ರಾಹುಲ್, ಪಂತ್ ಗೆ ಹೆಚ್ಚಿನ ಬೇಡಿಕೆ ಸಿಗುವ ನಿರೀಕ್ಷೆ ಇದೆ.
ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಇಶಾನ್ ಕಿಶನ್ ಅವರಿಗೂ ಮೆಗಾ ಹರಾಜಿನಲ್ಲಿ ಸಾಕಷ್ಟು ಹಣ ಸಿಗುವುದು ಖಚಿತವಾಗಿದೆ. ಮುಂಬೈ ತಂಡ ಈಗಾಗಲೇ ಐವರು ಕ್ಯಾಪ್ಡ್ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿರುವುದರಿಂದ ಕಿಶನ್ ಅವರ ಮೇಲೆ ಆರ್ ಟಿಎಂ ಕಾರ್ಡ್ ನ್ನು ಬಳಸಲು ಸಾಧ್ಯವಿಲ್ಲ. ಹೀಗಾಗಿ ಕಿಶನ್ ಮುಂದಿನ ಆವೃತ್ತಿಯಿಂದ ಹೊಸ ತಂಡದೊಂದಿಗೆ ಕಾಣಿಕೊಳ್ಳಬಹುದು. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಿದೆ. ಈಗಾಗಲೇ ಫ್ರಾಂಚೈಸಿ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿರುವುದರಿಂದ ಬಟ್ಲರ್, ಮುಂದಿನ ಆವೃತ್ತಿಯಿಂದ ಹೊಸ ತಂಡದೊಂದಿಗೆ ಆಡುತ್ತಾರೆ.
ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಹರಾಜಿಗೆ ಬಿಡುಗಡೆ ಮಾಡಿದೆ. ಹೀಗಾಗಿ ಅವರಿಗೆ ಬೇಡಿಕೆ ಹೆಚ್ಚಾಗಬಹುದು.