ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಕಾರಣದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ರ ಪಂದ್ಯಾವಳಿಯು ಮೇ 17 ರಿಂದ ಪುನರಾರಂಭಗೊಳ್ಳಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಉಳಿದಿರುವ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಖಚಿತಪಡಿಸಿದೆ.
ಕಳೆದ ಗುರುವಾರ (ಮೇ 8) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಭದ್ರತಾ ಕಾರಣಗಳಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು, ಮತ್ತು ಮರುದಿನ (ಶುಕ್ರವಾರ) ಇಡೀ ಟೂರ್ನಮೆಂಟ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದ ನಂತರ ಇದೀಗ ಟೂರ್ನಮೆಂಟ್ ಪುನರಾರಂಭಗೊಳ್ಳುತ್ತಿದೆ.
ಇದನ್ನೂ ಓದಿ: http://ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿದ್ದು ಏಕೆ? ಧರ್ಮ ಕಾರಣವೇ? —
ಪರಿಷ್ಕೃತ ವೇಳಾಪಟ್ಟಿಯಂತೆ, ಮೇ 17 ರ ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದೊಂದಿಗೆ ಐಪಿಎಲ್ 2025 ಮತ್ತೆ ಆರಂಭವಾಗಲಿದೆ. ಒಟ್ಟು 17 ಪಂದ್ಯಗಳು (ಪ್ಲೇಆಫ್ಗಳು ಸೇರಿದಂತೆ) ಉಳಿದಿದ್ದು, ಇವು ಆರು ವಿವಿಧ ಸ್ಥಳಗಳಲ್ಲಿ ನಡೆಯಲಿವೆ.ಪ್ಲೇಆಫ್
ಪಂದ್ಯಗಳ ದಿನಾಂಕಗಳು
- ಕ್ವಾಲಿಫೈಯರ್ 1: ಮೇ 29 (ಸಂಜೆ 7:30)
- ಎಲಿಮಿನೇಟರ್: ಮೇ 30 (ಸಂಜೆ 7:30)
- ಕ್ವಾಲಿಫೈಯರ್ 2: ಜೂನ್ 1 (ಸಂಜೆ 7:30)
- ಫೈನಲ್: ಜೂನ್ 3 (ಸಂಜೆ 7:30)
ಐಪಿಎಲ್ 2025 ರ ಪರಿಷ್ಕೃತ ವೇಳಾಪಟ್ಟಿ (ಉಳಿದಿರುವ ಲೀಗ್ ಪಂದ್ಯಗಳು)
- ಮೇ 17: ಆರ್ಸಿಬಿ vs ಕೆಕೆಆರ್, ಬೆಂಗಳೂರು (ಸಂಜೆ 7:30)
- ಮೇ 18: ಆರ್ಆರ್ vs ಪಿಬಿಕೆಎಸ್, ಜೈಪುರ (ಮಧ್ಯಾಹ್ನ 3:30)
- ಮೇ 18: ದೆಹಲಿ vs ಗುಜರಾತ್, ದೆಹಲಿ (ಸಂಜೆ 7:30)
- ಮೇ 19: ಎಲ್ಎಸ್ಜಿ vs ಎಸ್ಆರ್ಎಚ್, ಲಕ್ನೋ (ಸಂಜೆ 7:30)
- ಮೇ 20: ಸಿಎಸ್ಕೆ vs ಆರ್ಆರ್, ದೆಹಲಿ (ಸಂಜೆ 7:30)
- ಮೇ 21: ಮುಂಬೈ vs ದೆಹಲಿ, ಮುಂಬೈ (ಸಂಜೆ 7:30)
- ಮೇ 22: ಗುಜರಾತ್ vs ಎಲ್ಎಸ್ಜಿ, ಅಹಮದಾಬಾದ್ (ಸಂಜೆ 7:30)
- ಮೇ 23: ಆರ್ಸಿಬಿ vs ಎಸ್ಆರ್ಎಚ್, ಬೆಂಗಳೂರು (ಸಂಜೆ 7:30)
- ಮೇ 24: ಪಂಜಾಬ್ vs ಡೆಲ್ಲಿ, ಜೈಪುರ (ಸಂಜೆ 7:30)
- ಮೇ 25: ಗುಜರಾತ್ vs ಸಿಎಸ್ಕೆ, ಅಹಮದಾಬಾದ್ (ಮಧ್ಯಾಹ್ನ 3:30)
- ಮೇ 25: ಎಸ್ಆರ್ಎಚ್ vs ಕೆಕೆಆರ್, ದೆಹಲಿ (ಸಂಜೆ 7:30)
- ಮೇ 26: ಪಂಜಾಬ್ vs ಮುಂಬೈ, ಜೈಪುರ (ಸಂಜೆ 7:30)
- ಮೇ 27: ಎಲ್ಎಸ್ಜಿ vs ಆರ್ಸಿಬಿ, ಲಕ್ನೋ (ಸಂಜೆ 7:30)
ಪಂದ್ಯಾವಳಿ ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕೆಲವು ತಂಡಗಳು ಈಗಾಗಲೇ ಅಭ್ಯಾಸವನ್ನು ಶುರು ಮಾಡಿವೆ. ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತರಬೇತಿ ಪುನರಾರಂಭಿಸಿದೆ ಎಂದು ವರದಿಯಾಗಿದೆ.