ಕೋಲ್ಕೊತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ, ಬಾಲಿವುಡ್ ಬ್ಲಾಕ್‌ಬಸ್ಟರ್ ಚಿತ್ರ ‘ಪಠಾಣ್’ನ ವೈರಲ್ ಗೀತೆ ‘ಝೂಮೆ ಜೋ ಪಠಾಣ್’ಗೆ, ನಟ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್‌ನ ಮಾಲೀಕ ಶಾರುಖ್ ಖಾನ್ ಜೊತೆಗೆ ಡಾನ್ಸ್ ಮಾಡಿರುವ ವಿಡಿಯೊ ವೈರಲ್ ಆಗಿದೆ., ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ, ಮಾರ್ಚ್ 22ರಂದು ಅವರು ಕ್ರಿಕೆಟ್ ಪ್ರೇಕ್ಷಕರನ್ನು ನೃತ್ಯ ಮಾಡಿ ರಂಜಿಸಿದರು. .
ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೈತ್ಯರಾದ ಈ ಇಬ್ಬರು, ಕೊಲ್ಕತ್ತಾದಲ್ಲಿ ನಡೆದ ಈ ಐಪಿಎಲ್ 2025ರ ಉದ್ಘಾಟನಾ ಪಂದ್ಯದ ಮೊದಲು ನಡೆದ ಕಾರ್ಯಕ್ರಮದಲ್ಲಿ ಜತೆಯಾಗಿ ಕುಣಿದರು. ಈ ಜೋಡಿ ಗೀತೆಗೆ ಸ್ವಲ್ಪ ಸೆಕೆಂಡ್‌ಗಳ ಕಾಲ ಡ್ಯಾನ್ಸ್ ಮಾಡಿದ ನಂತರ ಒಬ್ಬರನ್ನೊಬ್ಬರು ಆತ್ಮೀಯವಾಗಿ ಆಲಿಂಗಿಸಿಕೊಂಡರು.
ಕೆಕೆಆರ್ ಮತ್ತು ಆರ್‌ಸಿಬಿ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಆಡಿತು. ಈ ಎರಡು ತಂಡಗಳ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯ ಎರಡನೇ ಬಾರಿ ನಡೆದಿದೆ. 2008ರ ಉದ್ಘಾಟನಾ ಆವೃತ್ತಿಯಲ್ಲಿ ಎರಡೂ ತಂಡಗಳು ಆಡಿದ್ದವು. ಆ ಪಂದ್ಯದಲ್ಲಿ ಶಾರುಖ್ ಖಾನ್ ಮಾಲೀಕತ್ವದ ತಂಡವು ಆರ್ಸಿಬಿ ವಿರುದ್ಧ 140 ರನ್ಗಳ ಗೆಲುವು ದಾಖಲಸಿತ್ತು. ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು.
ಅಂದಿನಿಂದ 18 ಋತುಗಳು ಕಳೆದಿವೆ. ಕೆಕೆಆರ್ ಮೂರು ಬಾರಿ ಟ್ರೋಫಿ ಗೆದ್ದರೆ, ಆರ್‌ಸಿಬಿ ಇನ್ನೂ ಒಂದು ಬಾರಿಯೂ ಗೆಲುವಿನ ಖಾತೆ ತೆರೆಯಲಿಲ್ಲ. ಕೆಕೆಆರ್, 2024ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ್ನು ಸೋಲಿಸಿ ಟ್ರೋಫಿ ಗೆದ್ದಿತು. ಆರ್‌ಸಿಬಿಗೆ ಬಂದರೆ, ಋತುವಿನ ಎರಡನೇ ಅರ್ಧದಲ್ಲಿ ಪ್ರೇರಣಾದಾಯಕ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್‌ನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆಯಿತು. ಆದರೆ, ಎಲಿಮಿನೇಟರ್‌ನಲ್ಲಿ ಸೋತರು.
ಅಜಿಂಕ್ಯ ರಹಾನೆ (ಕೆಕೆಆರ್) ಮತ್ತು ರಜತ್ ಪಾಟಿದಾರ್ (ಆರ್‌ಸಿಬಿ) ಮುನ್ನಡೆಸುತ್ತಿದ್ದಾರೆ. ರಹಾನೆ ಮತ್ತು ಪಾಟಿದಾರ್ ತಮ್ಮ ತಂಡಗಳಿಗೆ ಮೊದಲ ಬಾರಿಗೆ ನಾಯಕತ್ವ ಮಾಡುತ್ತಿದ್ದಾರೆ. ಪಾಟಿದಾರ್ ಆರ್‌ಸಿಬಿಯೊಂದಿಗೆ ಮೂರು ಋತುಗಳನ್ನು ಕಳೆದಿದ್ದಾರೆ.